Publish Date: Mon, 27 Jul 2020 (10:30 IST)
Updated Date: Mon, 27 Jul 2020 (10:32 IST)
ಬೆಂಗಳೂರು: ಆಗಸ್ಟ್ 1 ರಿಂದ ಅನ್ ಲಾಕ್ 3.0 ಜಾರಿಗೆ ಬರಲಿದೆ. ಈ ವೇಳೆ ಮತ್ತಷ್ಟು ನಿಯಮಗಳು ಸಡಿಲಗೊಳ್ಳುವ ಸಾಧ‍್ಯತೆಯಿದೆ. ಈ ನಡುವೆ ಸಿನಿಮಾ ಮಂದಿ ಥಿಯೇಟರ್ ತೆರೆಯಲು ಒಪ್ಪಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಕೇಂದ್ರ ಸರ್ಕಾರ ಅನ್ ಲಾಕ್ 3.0 ನಿಯಮ ರೂಪಿಸುತ್ತಿದ್ದು, ಸಿನಿಮಾ ಮಂದಿರಗಳನ್ನು ತೆರೆಯಲು ಷರತ್ತುಬದ್ಧ ಒಪ್ಪಿಗೆ ನೀಡುವ ಸಾಧ‍್ಯತೆಯಿದೆ ಎನ್ನಲಾಗಿದೆ. ಹೀಗಾದಲ್ಲಿ ಈಗಾಗಲೇ ಬಿಡುಗಡೆಗಾಗಿ ಕಾದು ಕುಳಿತಿರುವ ನೂರಾರು ಚಿತ್ರಗಳಿಗೆ ಬಿಡುಗಡೆಯ ಭಾಗ್ಯ ದೊರೆಯಲಿದೆ. ಜತೆಗೆ ಚಿತ್ರೋದ್ಯಮವೂ ಆರ್ಥಿಕ ಸಂಕಷ್ಟದಿಂದ ಮೇಲೇಳಲಿದೆ.