ನವದೆಹಲಿ: ಕೊರೋನಾ ಭಯದಿಂದ ಹೆಚ್ಚಿನ ಕಂಪನಿಗಳು ತಮ್ಮ ನೌಕರರಿಗೆ ಅಗತ್ಯವಿದ್ದರೆ ಮಾತ್ರ ಕಚೇರಿಗೆ ಬಂದರೆ ಸಾಕು ಎಂದು ವರ್ಕ್ ಫ್ರಂ ಹೋಂ ಆಯ್ಕೆ ಕೊಟ್ಟುಬಿಟ್ಟಿದೆ.
ಆದರೆ ಇದರಿಂದ ಹೆಚ್ಚಿನ ಮಂದಿಗೆ ಆಫೀಸ್ ಗೆ ಹೋಗುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇತ್ತೀಚೆಗೆ ನಡೆದ ಜಾಗತಿಕ ಸಮೀಕ್ಷೆಯೊಂದರಲ್ಲಿ ಈ ವಿಚಾರ ತಿಳಿದುಬಂದಿದ್ದು, ಶೇ. 80 ರಷ್ಟು ಭಾರತೀಯರು ಕಚೇರಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.
ಈ ಪಟ್ಟಿಯಲ್ಲಿ ಸಿಂಗಾಪುರ ರಾಷ್ಟ್ರ ಮುಂದಿದ್ದು, ಇಲ್ಲಿ ಶೇ81 ಮಂದಿ ಕಚೇರಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರತಿನಿತ್ಯ ಕಚೇರಿಗೆ ತೆರಳುವುದು ಜೀವನದ ಭಾಗವಾಗಿತ್ತು. ಆದರೆ ಈಗ ಅದನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಮಂದಿ ಅಭಿಪ್ರಾಯಪಟ್ಟಿದ್ದಾರೆ.