Publish Date: Sat, 14 Apr 2018 (07:10 IST)
Updated Date: Sat, 14 Apr 2018 (07:30 IST)
ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ತವರಿನ ರಾಯಲ್ ಚಾಲೆಂಜರ್ಸ್ ಪಾಲಾಗಿದೆ.
ಆರ್ ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ 4 ವಿಕೆಟ್ ಗಳ ಜಯ ದಾಖಲಿಸಿದೆ. ಗೆಲುವಿಗೆ 156 ರನ್ ಬೆನ್ನತ್ತಿದ ಆರ್ ಸಿಬಿ 19.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ.
ಆರಂಭದಲ್ಲಿಯೇ ಬ್ರೆಂಡಮ್ ಮೆಕಲಮ್ ವಿಕೆಟ್ ಕಳೆದುಕೊಂಡರೂ ಕ್ವಿಂಟನ್ ಡಿ ಕಾಕ್ 45 ರನ್ ಸಿಡಿಸಿ ಆಧಾರವಾದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡಿದ ಎಬಿಡಿ ವಿಲಿಯರ್ಸ್ 40 ಎಸೆತಗಳಲ್ಲಿ 57 ರನ್ ಸಿಡಿಸಿ ಗೆಲುವಿನ ಹಾದಿ ಸುಗಮವಾಗಿಸಿದರು. ಇದರೊಂದಿಗೆ ಆರ್ ಸಿಬಿ ಈ ಆವೃತ್ತಿಯ ಮೊದಲ ಗೆಲುವು ದಾಖಲಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.