Publish Date: Fri, 13 Apr 2018 (09:37 IST)
Updated Date: Fri, 13 Apr 2018 (09:39 IST)
ನವದೆಹಲಿ: ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಒಂದೆಡೆ ಭಾರತೀಯರು ಪದಕ ಗೆದ್ದು ಕೀರ್ತಿ ತರುತ್ತಿದ್ದರೆ, ಇಬ್ಬರು ಅಥ್ಲೆಟ್ ಉದ್ದೀಪನಾ ಔಷಧ ಸೇವಿಸಿದ ಆರೋಪಕ್ಕೊಳಗಾಗಿದ್ದಾರೆ.
ಭಾರತೀಯ ಅಥ್ಲೆಟ್ ಗಳಾದ ರಾಕೇಶ್ ಬಾಬು ಮತ್ತು ಇರ್ಫಾನ್ ಕೊಲೂಥಮ್ ಮೇಲೆ ಉದ್ದೀಪನಾ ಔಷಧಿ ಸೇವಿಸಿದ ಆರೋಪ ಹೊರಿಸಲಾಗಿದೆ. ಇವರಿಬ್ಬರೂ ತಂಗಿದ್ದ ಕೊಠಡಿಯಲ್ಲಿ ಬಳಸಿದ ಸಿರಿಂಜ್ ಪತ್ತೆಯಾಗಿದ್ದು, ಇಬ್ಬರಿಗೂ ಕೂಟದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ.
ರಾಕೇಶ್ ಬಾಬು ಟ್ರಿಪಲ್ ಜಂಪರ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ, ಇರ್ಫಾನ್ ಕಾಲ್ನಡಿಗೆಯ ವಿಭಾಗದಲ್ಲಿ ಸ್ಪರ್ಧಿಸಬೇಕಾಗಿತ್ತು. ಇದೀಗ ಇಬ್ಬರನ್ನೂ ತಕ್ಷಣವೇ ಆಸ್ಟ್ರೇಲಿಯಾ ಬಿಡುವಂತೆ ಸೂಚಿಸಲಾಗಿದ್ದು, ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.