Publish Date: Thu, 12 Apr 2018 (09:27 IST)
Updated Date: Fri, 13 Apr 2018 (18:57 IST)
ಚೆನ್ನೈ: ಕಾವೇರಿ ವಿವಾದದ ಪ್ರತಿಭಟನೆಯಿಂದಾಗಿ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳು ರದ್ದಾಗುವ ನಿರೀಕ್ಷೆಯಿದೆ.
ಮೊನ್ನೆ ಕೆಕೆಆರ್ ಮತ್ತು ಸಿಎಸ್ ಕೆ ನಡುವಿನ ಪಂದ್ಯದ ವೇಳೆ ಕಾವೇರಿ ಹೋರಾಟಗಾರರು ಮೈದಾನದಲ್ಲೇ ಪ್ರತಿಭಟನೆ ನಡೆಸಿ ರದ್ದಾಂತವಾಗಿತ್ತು. ಈ ಹಿನ್ನಲೆಯಲ್ಲಿ ಭದ್ರತಾ ಕಾರಣಗಳಿಂದ ಚೆನ್ನೈ ಮೈದಾನದಲ್ಲಿ ನಡೆಯಲಿರುವ ಪಂದ್ಯಗಳು ಬೇರೆ ರಾಜ್ಯಗಳಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಂದು ಸಿಎಸ್ ಕೆ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಬೇಕಿದ್ದ ಪಂದ್ಯದ ಟಿಕೆಟ್ ಗಳನ್ನು ರದ್ದುಪಡಿಸಿರುವುದು ಈ ವರದಿಗೆ ಪುಷ್ಠಿ ನೀಡಿದೆ. ಆದರೆ ಹೊಸ ಸ್ಥಳ ಯಾವುದೆಂದು ಇನ್ನೂ ನಿಗದಿಯಾಗಿಲ್ಲ.
ಆದರೆ ಇದರಿಂದ ಚೆನ್ನೈ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಚಿತ. ಮೊನ್ನೆ ಪ್ರತಿಭಟನೆ ನಡೆದಾಗಲೇ ಹಲವಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪಂದ್ಯ ಸ್ಥಳಾಂತರವಾಗಬಹುದು ಎಂದು ಭೀತಿ ವ್ಯಕ್ತಪಡಿಸಿದ್ದರು. ಅದೀಗ ನಿಜವಾಗುವ ಲಕ್ಷಣ ತೋರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.