Publish Date: Wed, 30 Sep 2020 (10:52 IST)
Updated Date: Wed, 30 Sep 2020 (10:54 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಂದ ಮೇಲೆ ಸ್ವಲ್ಪವಾದರೂ ಕನ್ನಡ ಕಲಿಯದಿದ್ದರೆ ಹೇಗೆ? ಹೀಗಾಗಿ ಆರ್ ಸಿಬಿ ಟ್ರಂಪ್ ಕಾರ್ಡ್ ಬೌಲರ್ ಯಜುವೇಂದ್ರ ಚಾಹಲ್ ಅಲ್ಪ ಸ್ವಲ್ಪ ಕನ್ನಡ ಕಲಿತಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
ಚಾಹಲ್ ಸಂದರ್ಶನವೊಂದರಲ್ಲಿ ಹೇಗಿದ್ದೀರಿ? ಕನ್ನಡಿಗರೆಲ್ಲರೂ ನನಗೆ ಸಪೋರ್ಟ್ ಮಾಡಬೇಕು ಎಂಬಿತ್ಯಾದಿ ಕೆಲವು ಶಬ್ಧಗಳನ್ನು ಕನ್ನಡದಲ್ಲಿ ಹೇಳಿ ಅಭಿಮಾನಿಗಳನ್ನು ಖುಷಿಪಡಿಸಲು ಯತ್ನಿಸಿದ್ದಾರೆ. ಕಳೆದ ಪಂದ್ಯದಲ್ಲಿ ಕನ್ನಡಿಗ ದೇವದತ್ತ್ ಪಡಿಕ್ಕಲ್ ಕನ್ನಡದಲ್ಲಿ ಮಾತನಾಡುವುದನ್ನು ಶ್ರದ್ಧೆಯಿಂದ ಕೇಳಿಸಿಕೊಂಡಿದ್ದರು. ಈಗ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆಗೆ ನಾಲ್ಕು ಶಬ್ಧವಾದರೂ ಕನ್ನಡದಲ್ಲಿ ಮಾತನಾಡುವಷ್ಟು ಸುಧಾರಿಸಿದ್ದಾರೆ. ಇವರ ಕನ್ನಡ ಪ್ರೇಮ ಆರ್ ಸಿಬಿ ಅಭಿಮಾನಿಗಳಿಗಂತೂ ಖುಷಿಯಾಗಿದೆ.