Publish Date: Wed, 30 Sep 2020 (09:39 IST)
Updated Date: Wed, 30 Sep 2020 (09:43 IST)
ದುಬೈ: ಸತತ ಎರಡು ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂತಸದ ಸುದ್ದಿಯೊಂದು ಸಿಕ್ಕಿದೆ.
ಗಾಯದ ಕಾರಣದಿಂದ ಕಳೆದ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಮಧ‍್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಮತ್ತು ಖ್ಯಾತ ಆಲ್ ರೌಂಡರ್ ಡ್ವಾನ್ ಬ್ರಾವೋ ಚೇತರಿಸಿಕೊಂಡಿದ್ದು, ಮುಂದಿನ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಇದು ಚೆನ್ನೈಗೆ ಸಮಾಧಾನ ನೀಡಲಿದೆ. ಕಳೆದ ಪಂದ್ಯ ಸೋತ ಬಳಿಕ ಸ್ವತಃ ಧೋನಿ ಅಂಬಟಿ ರಾಯುಡು ಕೊರತೆ ತಂಡಕ್ಕೆ ಕಾಡುತ್ತಿದೆ ಎಂದಿದ್ದರು. ಇದೀಗ ಈ ಆಟಗಾರರು ತಂಡಕ್ಕೆ ಮರಳಿದರೆ ದೊಡ್ಡ ಬಲ ಸಿಕ್ಕಂತಾಗುತ್ತದೆ.