Publish Date: Wed, 30 Sep 2020 (09:30 IST)
Updated Date: Wed, 30 Sep 2020 (09:31 IST)
ದುಬೈ: ಪ್ರತೀ ಬಾರಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮೆರೆಯುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನಕ್ಕೆ ಇಳಿದಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್ ಗೆಲುವು ಸಾಧಿಸುವುದರೊಂದಿಗೆ ಸಿಎಸ್ ಕೆ ಅಂಕಪಟ್ಟಿಯಲ್ಲಿ ಅತ್ಯಂತ ಕೊನೆಯ ಸ್ಥಾನಕ್ಕೆ ಇಳಿದಿದೆ. ಇದನ್ನು ನೋಡಿ ನೆಟ್ಟಿಗರು ಸಿಎಸ್ ಕೆ ತಂಡವನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ವಿವಿಧ ಮೆಮೆಗಳ ಮೂಲಕ ನೆಟ್ಟಿಗರು ಚೆನ್ನೈ ಸದ್ಯದ ಪರಿಸ್ಥಿತಿಯನ್ನು ಲೇವಡಿ ಮಾಡಿದ್ದಾರೆ. ಮೂರು ಪಂದ್ಯಗಳ ಪೈಕಿ ಮೊದಲ ಪಂದ್ಯವನ್ನು ಮಾತ್ರ ಸಿಎಸ್ ಕೆ ಗೆದ್ದುಕೊಂಡಿತ್ತು.