Publish Date: Wed, 30 Sep 2020 (10:04 IST)
Updated Date: Wed, 30 Sep 2020 (10:06 IST)
ದುಬೈ: ಪ್ರಸಕ್ತ ಐಪಿಎಲ್ ನಲ್ಲಿ ಕಳಪೆ ಫಾರ್ಮ್ ಮುಂದುವರಿಸಿರುವ ಸಿಎಸ್ ಕೆ ನಾಯಕ ಧೋನಿ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಧೋನಿ ಒಳ್ಳೆಯ ಆಟಗಾರನಾಗಿರಬಹುದು. ಆದರೆ ಅದು ಇಲ್ಲಿ ಉಪಯೋಗಕ್ಕೆ ಬರಲ್ಲ. ಅವರು ಹಲವು ತಿಂಗಳು ಕ್ರಿಕೆಟ್ ನಿಂದ ದೂರವಿದ್ದರು. ಮತ್ತೆ ಮೊದಲಿನ ಫಾರ್ಮ್ ಗೆ ಬರಲು ಅವರಿಗೆ ಸ್ವಲ್ಪ ಸಮಯ ಬೇಕಾಗಬಹುದು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಧೋನಿ ಜತೆಗೆ ಸಿಎಸ್ ಕೆ ಕೂಡಾ ಇದುವರೆಗೆ ನಿರಾಶಾದಾಯಕ ಪರ್ಫಾರ್ಮೆನ್ಸ್ ಮುಂದುವರಿಸಿದೆ.