Publish Date: Thu, 05 Nov 2020 (09:41 IST)
Updated Date: Thu, 05 Nov 2020 (09:42 IST)
ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು 32 ನೇ ಜನ್ಮದಿನದ ಸಂಭ್ರಮ. ಕೊಹ್ಲಿ ಜನ್ಮದಿನಕ್ಕೆ ಕ್ರಿಕೆಟಿಗರು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.
ಸುರೇಶ್ ರೈನಾ, ಮೊಹಮ್ಮದ್ ಶಮಿ, ಮುಂತಾದವರು ಕಿಂಗ್ ಕೊಹ್ಲಿಗೆ ಶುಭ ಕೋರಿದ್ದಾರೆ. ಇನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡಾ ವಿಶೇಷ ಸಿಡಿಪಿ ಮೂಲಕ ಶುಭ ಕೋರಿದೆ. ಈ ಬಾರಿಯ ಬರ್ತ್ ಡೇ ಕೊಹ್ಲಿ ಪಾಲಿಗೆ ವಿಶೇಷವಾಗಿದೆ. ವೈಯಕ್ತಿಕವಾಗಿ ಅಪ್ಪನಾಗುತ್ತಿರುವ ಖುಷಿಯಿದ್ದರೆ, ಇನ್ನೊಂದೆಡೆ ವೃತ್ತಿಜೀವನದಲ್ಲೂ ಈ ಬಾರಿ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ಬಂದಿದ್ದು, ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ. ಇದೆಲ್ಲವೂ ಸಾಕಾರಗೊಂಡರೆ ಕೊಹ್ಲಿಗೆ ಪರ್ಫೆಕ್ಟ್ ಬರ್ತ್ ಡೇ ಗಿಫ್ಟ್ ಆಗಲಿದೆ.