Publish Date: Sat, 26 Sep 2020 (08:58 IST)
Updated Date: Sat, 26 Sep 2020 (08:59 IST)
ದುಬೈ: ಐಪಿಎಲ್ 13 ರಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡನೇ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 44 ರನ್ ಗಳ ಸೋಲು ಕಂಡಿದೆ.
ಯಂಗ್ ಶ್ರೇಯಸ್ ಐಯರ್ ನೇತೃತ್ವದ ಡೆಲ್ಲಿ ಪಡೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿ ಧೋನಿ ನೇತೃತ್ವದ ಸಿಎಸ್ ಕೆ ಸೋಲುಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಆರಂಭಿಕ ಪೃಥ್ವಿ ಶಾ 64, ರಿಷಬ್ ಪಂತ್ ಅಜೇಯ 37 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131ರನ್ ಗಳಿಸಲಷ್ಟೇ ಶಕ್ತವಾಯಿತು. ಫಾ ಡು ಪ್ಲೆಸಿಸ್ 43, ಕೇದಾರ್ ಜಾಧವ್ 26 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ರನ್ ಬರಲಿಲ್ಲ. ಇದರೊಂದಿಗೆ ಸಿಎಸ್ ಕೆ ಸತತ ಎರಡನೇ ಸೋಲು ಕಂಡಿತು.