Publish Date: Fri, 06 Nov 2020 (11:23 IST)
Updated Date: Fri, 06 Nov 2020 (11:25 IST)
ದುಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ 200 ಅಥವಾ 200 ಪ್ಲಸ್ ರನ್ ಗಳಿಸಿದಾಗಲೆಲ್ಲಾ ಬೇರೆ ತಂಡಗಳಿಗೆ ಗ್ರಹಚಾರ ಕಾದಿರುತ್ತದೆ! ಇದ ಹೇಗೆ ಅಂತೀರಾ? ದಾಖಲೆಗಳೇ ಹೇಳುತ್ತಿವೆ ನೋಡಿ!
ಮುಂಬೈ ಇಂಡಿಯನ್ಸ್ ಐಪಿಎಲ್ ನಲ್ಲಿ ಇದುವರೆಗೆ ಸುಮಾರು 10 ಬಾರಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದೆ. ಈ ಪೈಕಿ 10 ಬಾರಿಯೂ ಮುಂಬೈ ಗೆಲುವು ಕಂಡಿದೆ. ಹೀಗಾಗಿ ನಿನ್ನೆಯ ಪಂದ್ಯದಲ್ಲೂ ಮುಂಬೈ 200 ಗಡಿ ತಲುಪಿದಾಗ ಇಂದಿನ ಪಂದ್ಯ ಮುಂಬೈ ಗೆಲ್ಲಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಅದೃಷ್ಟದ ಲೆಕ್ಕಾಚಾರ ಕೈಕೊಡಲಿಲ್ಲ. ಮುಂಬೈ ಗೆಲುವು ಕಂಡಿತ್ತು.