Publish Date: Fri, 06 Nov 2020 (10:58 IST)
Updated Date: Fri, 06 Nov 2020 (10:59 IST)
ದುಬೈ: ಐಪಿಎಲ್ 13 ರ ಕ್ವಾಲಿಫೈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶೂನ್ಯಕ್ಕೆ ಔಟಾದ ಡೆಲ್ಲಿ ಆರಂಭಿಕ ಪೃಥ್ವಿ ಶಾ ಈಗ ಟ್ರೋಲ್ ಗೊಳಗಾಗಿದ್ದಾರೆ.
ಈ ಪಂದ್ಯದಲ್ಲಿ ಮಾತ್ರವಲ್ಲ, ಇಡೀ ಐಪಿಎಲ್ ನಲ್ಲಿ ಪೃಥ್ವಿ ಶಾ ಹೇಳಿಕೊಳ್ಳುವಂತಹ ಆಟವಾಡಿಲ್ಲ. ಅದರಲ್ಲೂ ಒಂದಂಕಿ ಮೊತ್ತವೇ ಹೆಚ್ಚು. ಹೀಗಾಗಿ ಟ್ವಿಟರಿಗರು ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ವಿವಿಧ ಮೆಮೆಗಳ ಮೂಲಕ ತಮಾಷೆ ಮಾಡಿದ್ದಾರೆ. ಒಂದು ವೇಳೆ ಪೃಥ್ವಿ ತಮ್ಮ ಹೊಡೆಬಡಿಯ ಶೈಲಿಯ ಆರಂಭ ನೀಡಿದ್ದರೆ ಡೆಲ್ಲಿ ಕತೆಯೇ ಬೇರೆಯದಾಗುತ್ತಿತ್ತು. ಹಾಗಿದ್ದರೂ ಅವರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ ಟ್ವಿಟರಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.