Publish Date: Fri, 06 Nov 2020 (10:12 IST)
Updated Date: Fri, 06 Nov 2020 (10:14 IST)
ದುಬೈ: ಐಪಿಎಲ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿಯೂ ಟೀಂ ಇಂಡಿಯಾಗೆ ಆಯ್ಕೆಯಾಗದ ಬೇಸರದಲ್ಲಿರುವ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಸೂರ್ಯ ಒಳ್ಳೆಯ ಆಟಗಾರ. ಸದ್ಯದಲ್ಲೇ ಅವನ ಸಮಯ ಬಂದೇ ಬರುತ್ತದೆ. ಯುವ ಆಟಗಾರರು ತಾಳ್ಮೆಯಿಂದಿರಬೇಕು. ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ. ಸೂರ್ಯ ಜತೆಗೆ ಇನ್ನಷ್ಟು ಯುವ ಟ್ಯಾಲೆಂಟೆಡ್ ಆಟಗಾರರಿದ್ದಾರೆ. ಅವರಿಗೆಲ್ಲಾ ಅವಕಾಶ ಖಂಡಿತಾ ಸಿಗುತ್ತದೆ ಎಂದು ಗಂಗೂಲಿ ಅಭಯ ನೀಡಿದ್ದಾರೆ.