Publish Date: Fri, 06 Nov 2020 (09:31 IST)
Updated Date: Fri, 06 Nov 2020 (09:33 IST)
ದುಬೈ: ಐಪಿಎಲ್ 13 ರ ನಿನ್ನೆಯ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಶೂನ್ಯ ಸಂಪಾದಿಸಿ ದಾಖಲೆ ಮಾಡಿದ್ದರೆ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಸಾಧನೆ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರೋಹಿತ್ ಐಪಿಎಲ್ ನಲ್ಲಿ ಗರಿಷ್ಠ 13 ಬಾರಿ ಶೂನ್ಯಕ್ಕೆ ಔಟಾದ ಬೇಡದ ದಾಖಲೆಯನ್ನು ತಮ್ಮ ಪಾಲಿಗೆ ಬರೆದುಕೊಂಡರು. ಈ ರೀತಿ ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್ ಕೂಡಾ 13 ಬಾರಿ ಶೂನ್ಯಕ್ಕೆ ಔಟಾಗಿ ರೋಹಿತ್ ಜತೆಗೆ ಸ್ಥಾನ ಪಡೆದಿದ್ದಾರೆ.
ಇನ್ನು, ಬುಮ್ರಾ ನಾಲ್ಕು ಓವರ್ ಗಳಲ್ಲಿ 14 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಅವರು ಈ ಸೀಸನ್ ನಲ್ಲಿ ಪಡೆದ ವಿಕೆಟ್ ಗಳ ಸಂಖ್ಯೆ 27 ಕ್ಕೆ ತಲುಪಿತು. ಇದು ಯಾವುದೇ ಭಾರತೀಯ ಬೌಲರ್ ಐಪಿಎಲ್ ನಲ್ಲಿ ಗಳಿಸಿದ ಗರಿಷ್ಠ ವಿಕೆಟ್ ಆಗಿದೆ. ಇದಕ್ಕೂ ಮೊದಲು 2018 ರಲ್ಲಿ ಭುವನೇಶ್ವರ್ ಕುಮಾರ್ 26 ವಿಕೆಟ್ ಪಡೆದಿದ್ದು ದಾಖಲೆಯಾಗಿತ್ತು.