Publish Date: Sun, 20 Sep 2020 (10:33 IST)
Updated Date: Sun, 20 Sep 2020 (10:35 IST)
ದುಬೈ: ಮಹೇಂದ್ರ ಸಿಂಗ್ ಧೋನಿ ತಮ್ಮ ಆಟ ಮಾತ್ರವಲ್ಲ, ವಿಶಿಷ್ಟ ಹೇರ್ ಸ್ಟೈಲ್ ನಿಂದಲೂ ಜನರ ಗಮನ ಸೆಳೆಯುತ್ತಿರುತ್ತಾರೆ. ಐಪಿಎಲ್ 13 ಗಾಗಿಯೇ ಅವರು ಮಾಡಿಕೊಂಡ ವಿಶಿಷ್ಟ ಹೇರ್ ಸ್ಟೈಲ್, ಗಡ್ಡ ಈಗ ವೀಕ್ಷಕರ ಗಮನ ಸೆಳೆಯುತ್ತಿದೆ.
ರೌಂಡ್ ಹೇರ್ ಕಟ್ ಜತೆಗೆ ಪಕ್ಕಾ ದಕ್ಷಿಣ ಭಾರತ ಶೈಲಿಯಲ್ಲಿ ಮೀಸೆ, ಗಡ್ಡ ಬೆಳೆಸಿಕೊಂಡಿರುವ ಧೋನಿಯ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದು, ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಧೋನಿಯ ಕಟ್ಟಾ ಅಭಿಮಾನಿಗಳು ಇನ್ನು ಅವರ ಈ ಹೊಸ ಸ್ಟೈಲ್ ನ್ನು ತಮ್ಮದಾಗಿಸಿಕೊಳ್ಳುವುದು ಖಂಡಿತಾ.