Publish Date: Sun, 20 Sep 2020 (09:49 IST)
Updated Date: Sun, 20 Sep 2020 (09:50 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯ ನಿನ್ನೆ ಮುಕ್ತಾಯವಾಗಿದೆ. ಇಂದು ದ್ವಿತೀಯ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆಯಲಿದೆ.
ಇದೂ ಕೂಡಾ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ. ಒಂದು ರೀತಿಯಲ್ಲಿ ಎರಡೂ ಪಂದ್ಯಗಳೂ ಸಮಬಲದ ತಂಡಗಳಾಗಿವೆ. ಪಂಜಾಬ್ ಕೆಎಲ್ ರಾಹುಲ್ ನಾಯಕತ್ವದಲ್ಲಿ ಪುಟಿದೇಳುವ ಉತ್ಸಾಹದಲ್ಲಿದೆ. 2014 ರ ನಂತರ ಪಂಜಾಬ್ ಫೈನಲ್ ಗೇರಿಲ್ಲ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಗೆ ಇದುವರೆಗಿನ ಐಪಿಎಲ್ ನಲ್ಲಿ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ. ಒಮ್ಮೆಯೂ ಫೈನಲ್ ಗೇರದ ಡೆಲ್ಲಿಗೆ ಈ ಬಾರಿಯಾದರೂ ಆ ಕೊರತೆ ನೀಗಿಸುವ ವಿಶ್ವಾಸವಿದೆ.