Publish Date: Thu, 01 Oct 2020 (08:59 IST)
Updated Date: Thu, 01 Oct 2020 (09:01 IST)
ದುಬೈ: ಐಪಿಎಲ್ 13 ರಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದ್ದ ರಾಜಸ್ಥಾನ್ ರಾಯಲ್ಸ್ ಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ಶಾಕ್ ಕೊಟ್ಟಿದೆ. ನಿನ್ನೆ ನಡೆದ ಪಂದ್ಯವನ್ನು ಕೆಕೆಆರ್ 37 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಶಬ್ಮಂ ಗಿಲ್ 47, ನಿತೀಶ್ ರಾಣಾ 22, ಆಂಡ್ರೆ ರಸೆಲ್ 24, ಇಯಾನ್ ಮಾರ್ಗನ್ 34 ರನ್ ಗಳಿಸಿದರು. ರಾಜಸ್ಥಾನ್ ಪರ ಜೋಫ್ರಾ ಆರ್ಚರ್ 2 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಬಲಾಢ್ಯ ಬ್ಯಾಟಿಂಗ್ ಸುಲಭವಾಗಿ ಎದುರಾಳಿ ಮುಂದೆ ಶರಣಾಯಿತು. ರಾಜಸ್ಥಾನ್ ಪರ ಆರಂಭಿಕ ಜೋಸ್ ಬಟ್ಲರ್ 21, ಕೆಳ ಕ್ರಮಾಂಕದಲ್ಲಿ ಟಾಮ್ ಕರನ್ ಅಜೇಯ 54 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರದ್ದೂ ಒಂದಂಕಿ ಮೊತ್ತ. ಇದರೊಂದಿಗೆ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.