Publish Date: Thu, 08 Oct 2020 (10:15 IST)
Updated Date: Thu, 08 Oct 2020 (10:17 IST)
ದುಬೈ: ಎಷ್ಟೇ ಉತ್ತಮ ಪ್ರದರ್ಶನ ಕೊಟ್ಟರೂ ಯಶಸ್ಸು ಮಾತ್ರ ದಕ್ಕದೇ ನಿರಾಸೆಯಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಮತ್ತೊಂದು ಪಂದ್ಯಕ್ಕೆ ಅಣಿಯಾಗುತ್ತಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಇಂದು ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಸೆಣಸಾಡಲಿದೆ. ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿರುವ ಪಂಜಾಬ್ ಸೋಲಿನ ಸರಪಳಿ ಕಳಚಲು ಹೈದರಾಬಾದ್ ವಿರುದ್ಧದ ಪಂದ್ಯವನ್ನು ವೇದಿಕೆಯಾಗಿಸಬಹುದು. ಸದ್ಯಕ್ಕೆ ಹೈದರಾಬಾದ್ ಕೂಡಾ ಆರನೇ ಸ್ಥಾನದಲ್ಲಿದೆಯಷ್ಟೇ. ಹೀಗಾಗಿ ಪಂಜಾಬ್ ನಲ್ಲಿರುವ ಪ್ರತಿಭಾವಂತರಿಗೆ ಹೈದರಾಬಾದ್ ಸೋಲಿಸಲು ಕಷ್ಟವಾಗದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.