Publish Date: Wed, 07 Oct 2020 (11:29 IST)
Updated Date: Wed, 07 Oct 2020 (11:41 IST)
ಮುಂಬೈ: ಐಪಿಎಲ್ 13 ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಗೆ ಮತ್ತೊಂದು ಆಘಾತ ಕಾದಿದೆ.
ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಆಡಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭುವನೇಶ್ವರ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವುದು ಡೌಟ್ ಎನ್ನಲಾಗಿದೆ. ಭುವಿ ಗಾಯ ಗಂಭೀರವಾಗಿದ್ದು, ಮುಂದಿನ 6 ರಿಂದ 8 ವಾರಗಳ ಕಾಲ ಕ್ರಿಕೆಟ್ ನಿಂದ ದೂರವುಳಿಯಬೇಕಾಗಿದೆ. ಹೀಗಾಗಿ ಅವರು ಆಸ್ಟ್ರೇಲಿಯಾ ಪ್ರವಾಸ ತೆರಳುವುದು ಅನುಮಾನವಾಗಿದೆ.