Publish Date: Thu, 08 Oct 2020 (09:07 IST)
Updated Date: Thu, 08 Oct 2020 (09:08 IST)
ದುಬೈ: ಕೆಕೆಆರ್ ಚೆನ್ನೈ ವಿರುದ್ಧ ನಿನ್ನೆಯ ಪಂದ್ಯದಲ್ಲಿ ಗೆಲುವು ಗಳಿಸಿದ ಹೊರತಾಗಿಯೂ ದಿನೇಶ್ ಕಾರ್ತಿಕ್ ನಾಯಕತ್ವದ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. ನಾಯಕತ್ವಕ್ಕಿಂತ ಅವರ ಕಳಪೆ ಫಾರ್ಮ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಹೀಗಾಗಿ ಕಾರ್ತಿಕ್ ಗೆ ಬದಲಾಗಿ ಇಂಗ್ಲೆಂಡ್ ಮೂಲದ ಇಯಾನ್ ಮಾರ್ಗ್ ಗೆ ನಾಯಕತ್ವ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ದಿನೇಶ್ ಒಂದೇ ಒಂದು ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಜತೆಗೆ ನಿನ್ನೆಯ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿದ್ದ ಬದಲಾವಣೆಗಳು ಟೀಕೆಗೆ ಗುರಿಯಾಗಿದೆ. ಹೀಗಾಗಿ ಅವರನ್ನು ಬದಲಾಯಿಸಬೇಕೆಂದು ಟ್ವಿಟರಿಗರು ಒತ್ತಾಯಿಸಿದ್ದಾರೆ. ಮತ್ತೆ ಕೆಲವರು ಕಳಪೆ ಫಾರ್ಮ್ ಹೊರತಾಗಿಯೂ ತಂಡಕ್ಕೆ ಜಯ ಕೊಡಿಸಿದ್ದಕ್ಕೆ ಅವರಿಗೆ ಕ್ರೆಡಿಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.