Publish Date: Thu, 08 Oct 2020 (10:44 IST)
Updated Date: Thu, 08 Oct 2020 (10:46 IST)
ದುಬೈ: ಐಪಿಎಲ್ 13 ಆರಂಭವಾಗಿ ಮೂರು ವಾರ ಕಳೆಯುವಷ್ಟರಲ್ಲೇ ಗಾಯಾಳುಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಫ್ರಾಂಚೈಸಿಗಳಿಗೆ ತಲೆನೋವಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಭುವನೇಶ‍್ವರ್ ಕುಮಾರ್, ಡೆಲ್ಲಿ ತಂಡದಿಂದ ಅಮಿತ್ ಮಿಶ್ರಾ ಗಾಯಾಳುವಾಗಿ ಟೂರ್ನಿಯಿಂದ ಹೊರಬಿದ್ದರೆ ಈಗ ಕೆಕೆಆರ್ ತಂಡದಲ್ಲೂ ಗಾಯದ ಚಿಂತೆ ಆವರಿಸಿದೆ. ಕೆಕೆಆರ್ ಬೌಲರ್ ಅಮೆರಿಕಾ ಮೂಲದ ಅಲಿ ಖಾನ್ ಟೂರ್ನಿಯಿಂದ ಔಟ್ ಆಗಿದ್ದಾರೆ. ಬಹಳ ದಿನಗಳ ನಂತರ ಕ್ರಿಕೆಟ್ ಆಡುತ್ತಿರುವುದು, ಅಭ್ಯಾಸದ ಕೊರತೆ, ಹಾಗೂ ಯುಎಇಯ ಅತೀವ ಶಾಖ ಬೌಲರ್ ಗಳನ್ನು ಕಂಗೆಡಿಸುತ್ತಿದೆ ಎನ್ನಬಹುದು. ಇದರಿಂದಾಗಿ ಆಟಗಾರರು ಫಿಟ್ನೆಸ್ ಕೊರತೆ ಎದುರಿಸುತ್ತಿದ್ದು, ಗಾಯಾಳುಗಳ ಲಿಸ್ಟ್ ಕೂಡಾ ಹೆಚ್ಚುತ್ತಿದೆ.