Publish Date: Wed, 23 Sep 2020 (09:19 IST)
Updated Date: Wed, 23 Sep 2020 (09:20 IST)
ದುಬೈ: ಸಾಮಾನ್ಯವಾಗಿ ಧೋನಿ ಶಾಂತವಾಗಿಯೇ ಇರುತ್ತಾರೆ. ಆದರೆ ಅಗತ್ಯ ಬಂದಾಗ ವ್ಯಗ್ರರಾಗಲೂ ಹಿಂದೆ ಮುಂದೆ ನೋಡಲ್ಲ ಎಂಬುದು ಕಳೆದ ಐಪಿಎಲ್ ನಲ್ಲೇ ಸಾಬೀತಾಗಿತ್ತು. ನಿನ್ನೆಯ ಪಂದ್ಯದಲ್ಲಿ ಅದು ಮತ್ತೆ ಪುನರಾವರ್ತನೆಯಾಗಿದೆ.
டாஸ் வென்று பீல்டிங் தேர்வு செய்த தல தோனி!
ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾಡುವಾಗ 18 ನೇ ಓವರ್ ನಲ್ಲಿ ಟಾಮ್ ಕರನ್ ಧೋನಿಗೆ ಕ್ಯಾಚ್ ನೀಡಿದಾಗ ಮೊದಲು ಅಂಪಾಯರ್ ಔಟ್ ತೀರ್ಪು ನೀಡಿದರು. ಆದರೆ ರಾಜಸ್ಥಾನ್ ಆಗ ಡಿಆರ್ ಎಸ್ ಗೆ ಮನವಿ ಮಾಡಿತು. ಆದರೆ ಅವರಲ್ಲಿ ಮನವಿ ಮಾಡುವ ಅವಕಾಶಗಳು ಮುಗಿದು ಹೋಗಿತ್ತು. ಬಳಿಕ ಅಂಪಾಯರ್ ಗಳು ಪರಸ್ಪರ ಚರ್ಚಿಸಿ ನಿಯಮ ವಿರುದ್ಧವಾಗಿ ತೀರ್ಪನ್ನು ತೃತೀಯ ಅಂಪಾಯರ್ ಗೆ ನೀಡಿದರು. ಅಲ್ಲಿ ಚೆಂಡು ನೆಲಕ್ಕೆ ತಾಗಿದ್ದು ಸ್ಪಷ್ಟವಾಗಿ ಕರನ್ ನಾಟೌಟ್ ಎಂದು ಘೋಷಿಸಲಾಯಿತು. ಇದು ಧೋನಿಯನ್ನು ಕೆರಳಿಸಿದ್ದು ಅಂಪಾಯರ್ ಜತೆ ವಾಗ್ವಾದ ನಡೆಸಿದರು.