Publish Date: Sun, 08 Nov 2020 (09:34 IST)
Updated Date: Sun, 08 Nov 2020 (09:36 IST)
ದುಬೈ: ಈ ಬಾರಿಯೂ ಐಪಿಎಲ್ ನಲ್ಲಿ ಚಾಂಪಿಯನ್ ಆಗುವ ಕನಸು ಭಗ್ನಗೊಂಡ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿರಾಶೆ ಹೊರಹಾಕಿದ್ದಾರೆ.
ಆದರೆ ಕೆಲವು ಅಭಿಮಾನಿಗಳಂತೂ ಆರ್ ಸಿಬಿ ತಂಡದ ಹೆಸರನ್ನು ಬದಲಾಯಿಸುವ ಬಗ್ಗೆ ಸಲಹೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದಲು ತಂಡದ ಹೆಸರನ್ನು ರಾಯಲ್ ಚಾಲೆಂಜರ್ಸ್ ಕರ್ನಾಟಕ ಎಂದು ಬದಲಾಯಿಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ವಿರಾಟ್ ಕೊಹ್ಲಿ ನಾಯಕತ್ವವನ್ನು ಬದಲಾಯಿಸಬೇಕು. ಅವರಿಗೆ ಕೇವಲ ಅವರ ಬ್ಯಾಟಿಂಗ್ ಗೆ ಗಮನ ಕೊಡಲು ಅವಕಾಶ ಕೊಡಬೇಕು ಎಂದೂ ಸಲಹೆ ನೀಡಿದ್ದಾರೆ. ಜತೆಗೆ ಮುಂದಿನ ಬಾರಿ ಕಪ್ ನಮ್ದೇ ಎನ್ನುವ ಆಶಾಭಾವವನ್ನೂ ಹೊರಹಾಕಿದ್ದಾರೆ ಫ್ಯಾನ್ಸ್!