ಬೆಂಗಳೂರು: ಹೀಗೊಂದು ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ನನಗೇ ಹೆಚ್ಚು ಸೊಳ್ಳೆ ಕಡಿಯೋದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಸೊಳ್ಳೆ ಯಾಕೆ ಹೀಗೆ ಮಾಡುತ್ತದೆ ಗೊತ್ತಾ?
ನಿಮ್ಮ ದೇಹವೆಂದರೆ ಸೊಳ್ಳೆಗೆ ಇಷ್ಟವೇ?
ಕೆಲವು ಜನರಿಗೆ ಹೆಚ್ಚು ಹೆಚ್ಚು ಸೊಳ್ಳೆ ಕಡಿಯುವುದರ ಹಿಂದಿರುವ ಮರ್ಮವೇನು ಎಂದು ಅಧ್ಯಯನಗಳೇ ನಡೆಯುತ್ತಿವೆ. ಕೆಲವು ಮೂಲಗಳ ಪ್ರಕಾರ ಕೆಲವರ ದೇಹ ಹೊರ ಸೂಸುವ ವಾಸನೆ ಸೊಳ್ಳೆಗಳನ್ನು ಆಕರ್ಷಿಸುತ್ತವಂತೆ!
ರಕ್ತದ ಗುಂಪು
ನಿಮ್ಮ ರಕ್ತದ ಗುಂಪು ಎ ಅಥವಾ ಒ ಆಗಿದೆಯೇ? ಎ ಮಾದರಿಯ ರಕ್ತದ ಗುಂಪು ಹೊಂದಿರುವವರಿಗಿಂತ ಬಿ ಮಾದರಿಯ ರಕ್ತದ ಗುಂಪು ಹೊಂದಿರುವವರಿಗೆ ಸೊಳ್ಳೆ ಕಡಿಯುವುದು ಜಾಸ್ತಿಯಂತೆ.
ಕಾರ್ಬನ್ ಡೈ ಆಕ್ಸೈಡ್
ನಿಮ್ಮ ದೇಹದಿಂದ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಿದ್ದರೆ, ಅದಕ್ಕೆ ಸೊಳ್ಳೆಗಳು ಆಕರ್ಷಿತರಾಗುವುದು ಹೆಚ್ಚು. ಸ್ಥೂಲ ಕಾಯದವರಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುವ ಪ್ರಮಾಣ ಹೆಚ್ಚು.
ಅಥ್ಲೆಟಿಕ್ ಗಳಿಗೆ
ಸೊಳ್ಳೆಗಳಿಗೆ ಮೈ ಬಿಸಿಯಾಗಿದ್ದರೆ, ಬೆವರು ಹರಿಯುತ್ತಿದ್ದರೆ, ಇದರ ವಾಸನೆಯಿದ್ದರೆ ಇಷ್ಟ. ಕ್ರೀಡಾಳುಗಳಲ್ಲಿ ಇಂತಹ ಪರಿಸ್ಥಿತಿ ಹೆಚ್ಚು. ಹಾಗಾಗಿ ಅವರಿಗೆ ಸೊಳ್ಳೆ ಕಡಿತ ಜಾಸ್ತಿ.
ಚರ್ಮ
ನಿಮ್ಮದು ಜಿಡ್ಡಿನ ಚರ್ಮವಾಗಿದ್ದರೆ ಸೊಳ್ಳೆಗಳಿಗೆ ಇಷ್ಟ.ಚರ್ಮದಲ್ಲಿ ಹೆಚ್ಚು ಕೊಬ್ಬಿನಂಶ ಸಂಗ್ರಹವಾಗಿದ್ದರೆ, ಸೊಳ್ಳೆಗಳೂ ನಿಮ್ಮತ್ತ ಆಕರ್ಷಿತವಾಗತ್ತವೆ.