ಬೆಂಗಳೂರು: ರಾತ್ರಿ ಊಟವಾದ ಮೇಲೆ ಮಲಗುವ ಮೊದಲು ಚೆನ್ನಾಗಿ ಬ್ರಷ್ ಮಾಡಿಕೊಂಡು ಮಲಗುವ ಅಭ್ಯಾಸ ಒಳ್ಳೆಯದು ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ.
ಆದರೆ ಎಷ್ಟು ಹೊತ್ತಿನ ನಂತರ ಬ್ರಷ್ ಮಾಡಬೇಕು ಎನ್ನುವುದು ನಮ್ಮ ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಔಚಿತ್ಯವಾಗುತ್ತದೆ. ಊಟವಾದ ತಕ್ಷಣವೇ ಬ್ರಷ್ ಮಾಡುವ ಅಭ್ಯಾಸ ನಮ್ಮೆಲ್ಲರದು.
ಆದರೆ ಇದು ತಪ್ಪು ಎನ್ನುತ್ತಾರೆ ತಜ್ಞರು. ಊಟವಾದ ತಕ್ಷಣ ಬ್ರಷ್ ಮಾಡುವುದರಿಂದ ಬಾಯಿಯಲ್ಲಿರುವ ಗ್ಯಾಸ್ ಹಲ್ಲಿಗೆ ತಾಗಿ ಹಲ್ಲು ತೂತಾಗಲು ಕಾರಣವಾಗುತ್ತದೆ. ಹಾಗಾಗಿ ಊಟವಾದ ಮೇಲೆ ಕನಿಷ್ಠ 30 ರಿಂದ 40 ನಿಮಿಷ ಬಿಟ್ಟು ಬ್ರಷ್ ಮಾಡುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.