Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದೇ ಒಂದು ಎಳೆನೀರು ಎಷ್ಟೊಂದು ಲಾಭ!

ಒಂದೇ ಒಂದು ಎಳೆನೀರು ಎಷ್ಟೊಂದು ಲಾಭ!
ಬೆಂಗಳೂರು , ಮಂಗಳವಾರ, 22 ಆಗಸ್ಟ್ 2017 (08:41 IST)
ಬೆಂಗಳೂರು: ಎಳೆನೀರು ಇಷ್ಟಪಡದವರು ಯಾರಿದ್ದಾರೆ? ಬೇಸಿಗೆ ಬಂತೆಂದರೆ ಸಾಕು. ಆದರೆ ಎಳನೀರು ಕುಡಿಯುವುದರಿಂದ ಎಷ್ಟೊಂದು ಲಾಭವಿದೆ ಗೊತ್ತಾ?

 
ಹೃದಯ ಖಾಯಿಲೆಗೆ
ತೆಂಗಿನ ಕಾಯಿ ತಿನ್ನುವುದರಿಂದ ಕೊಬ್ಬು ಶೇಖರಣೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ಎಳೆನೀರಿನಲ್ಲಿ ಕೊಬ್ಬಿನಂಶ ಇರುವುದಿಲ್ಲ ಮತ್ತು ಬೇಡದ ಕೊಬ್ಬು ನಿವಾರಿಸುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಖಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.

ಬೆಳಗಿನ ಸಂಕಟ
ಬೆಳಗ್ಗೆ ಎದ್ದಾಗ ಪಿತ್ತದ ಕಾರಣಕ್ಕೋ, ಇನ್ನೇನೋ ಕಾರಣಕ್ಕೋ ಹೊಟ್ಟೆ ತೊಳೆಸಿದಂತಾಗುವುದು, ಹಸಿವಿಲ್ಲದೇ ಇರುವುದು, ತಲೆ ಸುತ್ತಿದಂತಾಗುವುದು, ಇಂತಹ ಸಮಸ್ಯೆಗಳಿಗೆ ಎಳೆನೀರು ಸೇವನೆ ಉತ್ತಮ. ಎಳೆ ನೀರು ನಮ್ಮ ದೇಹವನ್ನು ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುತ್ತದೆ.

ತೂಕ ಇಳಿಸಲು ಸಹಕಾರಿ
ಅಂಗಡಿಗಳಲ್ಲಿ ಸಿಗುವ ಬಣ್ಣ ಬಣ್ಣದ ತಂಪು ಪಾನೀಯಗಳು ನಮ್ಮಲ್ಲಿ ದೇಹ ತೂಕ ಹೆಚ್ಚಿಸಬಹುದು. ಆದರೆ ಎಳೆ ನೀರಿನಲ್ಲಿ ಸುಲಭವಾಗಿ ಜೀರ್ಣವಾಗುವ ಗುಣವಿದ್ದು, ತೂಕ ಇಳಿಸಲು ಸಹಕಾರಿ.

ಮೈಗ್ರೇನ್ ತಲೆನೋವು
ಇಂದಿನ ಜೀವನ ಶೈಲಿಯಿಂದಾಗಿ ಬಹುತೇಕರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ದೇಹದಲ್ಲಿ ಮ್ಯಾಗ್ನೇಶಿಯಂನ ಕೊರತೆ. ಹಾಗಾಗಿ ಎಳೆನೀರಿನ ಸೇವನೆ ಇದಕ್ಕೆ ಪರಿಹಾರ ನೀಡಬಹುದು ಎನ್ನುವುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ.. ಕಿಚ್ಚ ಸುದೀಪ್ ಈಗ ಮಿಲಿಯನೇರ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆರಳು ಹೇಳುವುದು ಭವಿಷ್ಯ!