ನವಜಾತ ಶಿಶುಗಳು ಸಾವಿಗೀಡಾಗಿದ್ದ ಕೋಲಾರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.3 ಮಕ್ಕಳು ಅಸುನೀಗಿದ ಬಗ್ಗೆ ಸಚಿವರು ಮಾಹಿತಿ ಕಲೆ ಹಾಕಿದ್ದಾರೆ.
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಹುಟ್ಟಿದ ಸಂದರ್ಭ ಅತ್ಯಂತ ಕಡಿಮೆ ತೂಕವಿದ್ದುದರಿಂದ ಮಕ್ಕಳು ಮೃತಪಟ್ಟಿವೆ. ಚಿಂತಾಮಣಿಯಿಂದ ಬಂದಿದ್ದ ಅವಳಿ, ಮತ್ತೆರಡು ಅವಳಿ ಮಕ್ಕಳು ಹುಟ್ಟುವಾಗ ಕಡಿಮೆ ತೂಕವಿದ್ದುದರಿಂದ ಮೃತಪಟ್ಟಿವೆ. ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಲೋಪವಿದ್ದರೂ ತಿದ್ದಿಕೊಳ್ಳಲು ಸಿದ್ಧವಿದ್ದೇವೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲು ಸಿದ್ಧರಿದ್ದೇವೆ. ಆದರೆ, ಜಿಲ್ಲಾಸ್ಪತ್ರೆ ಬಗ್ಗೆ ಅಪನಂಬಿಕೆ ಮೂಡಿದರೆ ಬಡ ಜನ ಎಲ್ಲಿ ಹೋಗುತ್ತಾರೆ. ಈ ಬಗ್ಗೆ ಸಹಕರಿಸುವಂತೆ ಮಾಧ್ಯಮಗಳಿಗೆ ರಮೇಶ್ ಕುಮಾರ್ ಮನವಿ ಮಾಡಿದ್ದಾರೆ.
ಇದೇವೇಳೆ, ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿಗಳು ಶಿಸ್ತಿನಿಂದ ಕೆಲಸ ಮಾಡುತ್ತಿದ್ದಾರೆಂದು ಹೇಳಿದ ರಮೇಶ್ ಕುಮಾರ್, ಅವರ ಸಲಹೆ ಮೇರೆಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಕಾದ ಎಲ್ಲ ಸೌಲಭ್ಯ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ