Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಲಗಿದ ತಕ್ಷಣ ನಿದ್ರೆ ಬರುತ್ತಿಲ್ಲ ಎನ್ನುವವರು ಒಮ್ಮೇ ಹೀಗೇ ಮಾಡಿ ನೋಡಿ

Sleep

Sampriya

ಬೆಂಗಳೂರು , ಮಂಗಳವಾರ, 13 ಆಗಸ್ಟ್ 2024 (22:11 IST)
Photo Courtesy X
ಒಬ್ಬ ವ್ಯಕ್ತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಬೇಕೆಂದರೆ  ಊಟ ಹಾಗೂ ನಿದ್ದೆ ತುಂಬಾನೇ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಇವೆರಡೂ ಸರಿಯಾಗಿ ಮನುಷ್ಯನ ದೇಹಕ್ಕೆ ಬೀಳದೆ ಹೋದರೆ ಅನಾರೋಗ್ಯ ಕಾಡಲು ಶುರುವಾಗುತ್ತದೆ. ಜಗತ್ತು ಆಧುನಿಕ ಕಡೆ ವಾಲುತ್ತಿದ್ದ ಹಾಗೇ ಆರೋಗ್ಯದಲ್ಲಿ ಕಾಡುವ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಯಿತು.

ಪ್ರಸ್ತುತ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಎಲ್ಲ ವಯಸ್ಸಿನವರಲ್ಲೂ ಇದೀಗ ಸರ್ವೇ ಸಾಮಾನ್ಯವಾಗಿದೆ.

ಅಂತವರಿಗೆ ಬೆಡ್ ಹೋಗಿ ಅರ್ಧ ಗಂಟೆಯಲ್ಲಿ ನಿದ್ದೆ ಬರಬೇಕಾದರೆ ಈ ಸಲಹೆಗಳನ್ನು ಬಳಸಿಕೊಳ್ಳಿ.

1. ಮಲಗುವ  ಒಂದು ಅಥವಾ ಅರ್ಥ ಗಂಟೆ ಮುನ್ನಾ ಮೊಬೈಲ್‌ ಅನ್ನು ಬಳಬೇಡಿ. ಹೆಚ್ಚಿನವರಿಗೆ
ಮಲಗಿಕೊಂಡು ಮೊಬೈಲ್ ಬಳಸುವ ಅಭ್ಯಾಸ ಹೆಚ್ಚಿರುತ್ತದೆ. ಇದರಿಂದ ಕತ್ತಲೆಯಲ್ಲಿ ಕಣ್ಣಿನ ಮೇಲೆ ಬೀಳುವ ಕಿರಣಗಳು ಮನುಷ್ಯ ನಿದ್ದೆಗೆ ಅಡ್ಡಿ ಪಡಿಸುತ್ತದೆ. ಇದರಿಂದ ನಿದ್ದೆ ದೂರವಾಗುತ್ತದೆ. ಆದ್ದರಿಂದ ಮೊಬೈಲ್‌ ಅನ್ನು ಆದಷ್ಟು ದೂರವಿಡಿ.

2. ಮೊಬೈಲ್‌ ಅನ್ನು ಸೈಲೆಂಟ್ ಮಾಡಿ ಬೆಡ್‌ನಿಂದ ದೂರವಿಡಿ. ಅಂದರೆ ಮೊಬೈಲ್‌ ಅನ್ನು ಎದ್ದು ನೋಡುವ ಹಾಗೇ. ನಮ್ಮ ಪಕ್ಕದಲ್ಲೇ ಮೊಬೈಲ್ ಇದ್ದರೆ ನಿದ್ದೆ ಬಾರದ ಇದ್ದಾಗ ಟೈಮ್ ಪಾಸ್‌ಗೆ ಮೊಬೈಲ್ ನೋಡುವ ಅನ್ನಿಸುತ್ತದೆ. ಅದೇ ಮೊಬೈಲ್‌ ಅನ್ನು ಎದ್ದು ತರುವ ಹಾಗೇ ಇದ್ದರೆ ನಾವು ಮೊಬೈಲ್  ಬಳಕೆಯನ್ನು ದೂರ ಮಾಡುತ್ತೇವೆ.

3. ಸಮಯ ಪಾಲನೆ: ಮುಖ್ಯವಾಗಿ ದಿನನಿತ್ಯ ಬೆಳಿಗ್ಗೆ ಏಳುವುದು ಮತ್ತು ಮಲಗುವ ಸಮಯವನ್ನು ನಿಗದಿ ಮಾಡಿಕೊಳ್ಳಿ. ದಿನನಿತ್ಯ ಒಂದೇ ಸಮಯಕ್ಕೆ ಮಲಗಲು ಹೋಗುವುದರಿಂದ ಅದು ಅಭ್ಯಾಸವಾಗಿ ಅದೇ ಸಮಯಕ್ಕೆ ನಿದ್ದೆ ಬರುತ್ತದೆ. ಒಂದೆರಡು ದಿನ ಕಷ್ಟವಾಗುತ್ತದೆ. ಆದರ ಕಾಲಕ್ರಮೇಣ ನಾವು ಅದಕ್ಕೆ ಹೊಂದಿಕೊಳ್ಳುತ್ತೇವೆ.

4. ಈ ರೀತಿ ಮಾಡಿಯೂ ನಿದ್ದೆ ಬರುತ್ತಿಲ್ಲ ಎಂದರೆ ನಿದ್ದೆ ಬರಿಸುವ ನೀಲಾಂಬರಿ ಮ್ಯೂಸಿಕ್‌ ಅನ್ನು ಹಾಕಿ. ಈ ರೀತಿ ದಿನನಿತ್ಯ ನಮ್ಮ ಚಟುವಟಿಕೆಯಲ್ಲಿ ಸಮಯ ಪಾಲನೆ ಮಾಡುತ್ತ ಬದುಕಿದರೆ, ಮಾನಸಿಕವಾಗಿ ಸದೃಢರಾಗುತ್ತೇವೆ. ಇದರ ಪ್ರಯೋಜವನ್ನು ನಮ್ಮ ಕೆಲಸದ ಫಲಿತಾಂಶದಲ್ಲಿ ನಾವು ಕಾಣಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯರು ದಿನಕ್ಕೆ ಎಷ್ಟು ಗ್ಲಾಸ್ ಹಾಲು ಕುಡಿಯಬಹುದು