ಬೆಂಗಳೂರು: ಪ್ರತಿಯೊಬ್ಬರಿಗೂ ತಮ್ಮ ಚರ್ಮದ ಹೊಳಪು ಕಾಯ್ದುಕೊಳ್ಳಬೇಕು ಎಂಬ ಹಂಬಲವಿರುತ್ತದೆ. ನಮ್ಮ ಚರ್ಮ ಸಂರಕ್ಷಣೆಗಾಗಿ ರಾತ್ರಿ ಮಲಗುವ ಮುನ್ನ ಕೆಲವು ಕೆಲಸಗಳನ್ನು ಮಾಡಿದರೆ ಒಳ್ಳೆಯದು.
ರಾತ್ರಿ ಮಲಗುವ ಮುನ್ನ ಕೆಲವೊಂದು ಕೆಲಸವನ್ನು ನಿಯಮಿತವಾಗಿ ಮಾಡುತ್ತಾ ಬರುವುದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ. ಮೊದಲನೆಯದಾಗಿ ರಾತ್ರಿ ಮಲಗುವ ಮುನ್ನ ಮುಖ ತೊಳೆಯುವುದನ್ನು ಮರೆಯಬೇಡಿ. ಇದರಿಂದ ಹಗಲು ಧೂಳು, ಬಿಸಿಲಿಗೆ ಜಿಡ್ಡು ಜಿಡ್ಡಾದ ಮುಖ ಕ್ಲೀನ್ ಆಗುತ್ತದೆ.
ರಾತ್ರಿ ಮಲಗುವ ಮುನ್ನ ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲು ಸರಿಯಾಗಿ ನೀರು ಸೇವನೆ ಮಾಡಿ. ನೀರು ಸೇವನೆ ಮಾಡಿದಷ್ಟು ನಿಮ್ಮ ಚರ್ಮವೂ ತೇವಾಂಶ ಕಾಪಾಡುತ್ತದೆ. ಇನ್ನು ಚರ್ಮದ ಕಲ್ಮಶಗಳನ್ನು ತೆಗೆಯಲು ಟೋನರ್ ಗಳನ್ನು ಹಚ್ಚಿ ಮಲಗಿದರೆ ಉತ್ತಮ.
ಸೂಕ್ತ ತಜ್ಞರನ್ನು ಸಂಪರ್ಕಿಸಿ ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವ ಮಾಯಿಶ್ಚರೈಸ್ ಕ್ರೀಂ ಹಚ್ಚಿ ಮಲಗಿ. ಇದರಿಂದ ಚರ್ಮ ಒಣಗಿದಂತಾಗುವುದು ತಡೆಯುತ್ತದೆ. ಕಣ್ಣಿನ ಅಡಿಭಾಗ ಕಪ್ಪಾಗದಂತೆ ಸೂಕ್ತ ಕ್ರೀಂ ತಜ್ಞರ ಸಲಹೆ ಪಡೆದು ಹಚ್ಚಿಕೊಂಡು ಮಲಗಿ. ಎಲ್ಲಕ್ಕಿಂತ ಹೆಚ್ಚಾಗಿ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯವಾಗಿದೆ.