Publish Date: Sat, 30 Jan 2021 (07:13 IST)
Updated Date: Sat, 30 Jan 2021 (07:15 IST)
ಬೆಂಗಳೂರು : ಬಾದಾಮಿ ಎಣ್ಣೆ ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದು ಮುಖಕ್ಕೆ ಹಚ್ಚಿದ ಮೇಕಪ್ ಅನ್ನು ನಿವಾರಿಸಿಕೊಳ್ಳಲು ಬಹಳ ಸಹಕಾರಿಯಾಗಿದೆ.
ಕೈಯಲ್ಲಿ ಸ್ವಲ್ಪ ಬಾದಾಮಿ ಎಣ್ಣೆ ತೆಗೆದುಕೊಂಡು ನಿಮ್ಮ ಮುಖದ ಮೇಲೆ ನಿಧಾನವಾಗ ಮಸಾಜ್ ಮಾಡಿ. ಬಳಿಕ ಹತ್ತಿಯ ಚೆಂಡನ್ನು ತೆಗೆದುಕೊಂಡು ರೋಸ್ ವಾಟರ್ ನಲ್ಲಿ ಅದ್ದಿ ಮುಖದ ಮೇಲೆ ಉಜ್ಜಿ ಮೇಕಪ್ ನ್ನು ತೆಗೆದುಕೊಳ್ಳಿ. ಇದರಿಂದ ಚರ್ಮ ಡ್ರೈ ಆಗುವುದಿಲ್ಲ.