Publish Date: Fri, 29 Jan 2021 (12:24 IST)
Updated Date: Fri, 29 Jan 2021 (12:26 IST)
ಬೆಂಗಳೂರು : ರಾಬರ್ಟ್ ಚಿತ್ರ ರಿಲೀಸ್ ವಿವಾದ ಹಿನ್ನಲೆಯಲ್ಲಿ ತೆಲುಗು ಚಿತ್ರರಂಗದ ವಿರುದ್ಧ ಸ್ಯಾಂಡಲ್ ವುಡ್ ನ ನಟ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಬರ್ಟ್ ಚಿತ್ರವನ್ನು ಮಾರ್ಚ್ 11ರಂದು ರಿಲೀಸ್ ಮಾಡಲು ಸಿದ್ಧತೆ ಮಾಡಕೊಳ್ಳಲಾಗಿತ್ತು. ಆದರೆ ಟಾಲಿವುಡ್ ನಲ್ಲಿ ರಾಬರ್ಟ್ ಚಿತ್ರ ರಿಲೀಸ್ ಮಾಡಲು ಅಡ್ಡಿಪಡಿಸಲಾಗಿದೆ. ಇದರಿಂದ ಆಕ್ರೋಶಗೊಂಡ ನಟ ದರ್ಶನ್ ಫಿಲ್ಮ ಚೇಂಬರ್ ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ತೆಲುಗು ಚಿತ್ರರಂಗದ ಸಿನಿಮಾ ನಮ್ಮಲ್ಲಿ ರಿಲೀಸ್ ಮಾಡ್ತಾರೆ. ಆದರೆ ಕನ್ನಡ ಸಿನಿಮಾ ಅಲ್ಲಿ ರಿಲೀಸ್ ಮಾಡಲು ಬಿಡುತ್ತಿಲ್ಲ. ಮುಂದಿನ ದಿನಗಳಲ್ಲಿ ಯಂಗ್ ಸ್ಟಾರ್ ಗಳಿಗೆ ತೊಂದರೆಯಾಗುತ್ತದೆ ಎಂದು ಅವರು ಕಿಡಿಕಾರಿದ್ದಾರೆ.