Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಡುಗಿಯರೇ ದಪ್ಪನೆಯ ಕಪ್ಪನೆಯ ಹುಬ್ಬು ಬೇಕೆ...? ಇಲ್ಲಿದೆ ನೋಡಿ ಮನೆಮದ್ದು

ಹುಡುಗಿಯರೇ ದಪ್ಪನೆಯ ಕಪ್ಪನೆಯ ಹುಬ್ಬು ಬೇಕೆ...? ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಶನಿವಾರ, 23 ಡಿಸೆಂಬರ್ 2017 (12:32 IST)
ಬೆಂಗಳೂರು: ಹೆಣ್ಣು ಮಕ್ಕಳ ಮುಖದಲ್ಲಿ ಕಣ್ಣಿನ ಹುಬ್ಬು ದಪ್ಪವಾಗಿ ಕಪ್ಪಾಗಿ ಇರಬೇಕು. ಆಗ ಅವರ  ಮುಖಕ್ಕೆ ಒಂದು ಕಳೆಬರುತ್ತದೆ. ಕಣ್ಣಿನ ಹುಬ್ಬು ಚೆನ್ನಾಗಿಲ್ಲ ಅಂದರೆ ಮುಖದ ಅಂದ ಕೂಡ ಕೆಡುತ್ತದೆ. ಕೆಲವು ಹುಡುಗಿಯರ ಹುಬ್ಬಿನ ಕೂದಲು ತಳ್ಳಗೆ ಇದ್ದು ನೋಡಲು ಚೆಂದ ಕಾಣಿಸುವುದಿಲ್ಲ.ಅಂತವರು ತಮ್ಮ ಕಣ್ಣಿನ ಹುಬ್ಬು ಕಪ್ಪಾಗಿ, ದಪ್ಪವಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ.


ಸ್ವಲ್ಪ ಹರಳೆಣ್ಣೆಯನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ ಮಸಾಜ್ ಮಾಡಿ ಇದರಿಂದ ಅಲ್ಲಿ ರಕ್ತಸಂಚಾರ ಹೆಚ್ಚಾಗುತ್ತದೆ. ಅದನ್ನು ರಾತ್ರಿ ಹಾಗೆ ಇಟ್ಟುಕೊಂಡು ಮಲಗಿ ಬೆಳಿಗ್ಗೆ ತೊಳೆಯಿರಿ. ಹರಳೆಣ್ಣೆಯಲ್ಲಿ ಪ್ರೋಟಿನ್, ವಿಟಮಿನ್ ಹಾಗು ಆಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ಇದು ಕೂದಲು ಬೆಳೆಯಲು ಸಹಕರಿಸುತ್ತದೆ.


ಕೊಬ್ಬರಿ ಎಣ್ಣೆಯನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ ಮಸಾಜ್ ಮಾಡಿ ರಾತ್ರಿ ಹಾಗೆ ಇಟ್ಟುಕೊಂಡು ಮಲಗಿ ಬೆಳಿಗ್ಗೆ ತೊಳೆಯಿರಿ.ಇದರಲ್ಲಿ ಪ್ರೋಟಿನ್ ಹಾಗು ವಿಟಮಿನ್ ಇ ಇರುವುದರಿಂದ  ಇದು ಕೂಡ ಕೂದಲು ವೇಗವಾಗಿ ಬೆಳೆಯಲು ಸಹಾಯಕವಾಗಿದೆ. ಇದನ್ನು 2 ತಿಂಗಳುಗಳ ಕಾಲ ಪ್ರತಿದಿನ ಮಾಡಿ. ಹಾಗೆ ಈರುಳ್ಳಿಯ ರಸವನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ 5-10 ನಿಮಿಷ ಮಸಾಜ್ ಮಾಡಿ ಒಣಗಿದ ಮೇಲೆ ತೊಳೆಯಿರಿ. ಹೀಗೆ ದಿನ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನಿಯಲ್ಲಿರುವ ಕಲ್ಲು ಕರಗಬೇಕಾ…? ಇಲ್ಲಿದೆ ನೋಡಿ ಸುಲಭ ಉಪಾಯ