Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಿಡ್ನಿಯಲ್ಲಿರುವ ಕಲ್ಲು ಕರಗಬೇಕಾ…? ಇಲ್ಲಿದೆ ನೋಡಿ ಸುಲಭ ಉಪಾಯ

ಕಿಡ್ನಿಯಲ್ಲಿರುವ ಕಲ್ಲು ಕರಗಬೇಕಾ…? ಇಲ್ಲಿದೆ ನೋಡಿ ಸುಲಭ ಉಪಾಯ
ಬೆಂಗಳೂರು , ಶನಿವಾರ, 23 ಡಿಸೆಂಬರ್ 2017 (12:25 IST)
ಬೆಂಗಳೂರು: ಮನುಷ್ಯರಿಗೆ ಬರುವ ರೋಗಗಳಲ್ಲಿ ಕಿಡ್ನಿಯಲ್ಲಿ ಕಲ್ಲಾಗುವುದು ಒಂದು. ಅದರ  ನೋವು ಎಷ್ಟು  ಎನ್ನುವುದು ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿಯುವುದು. ಕಿಡ್ನಿಯಲ್ಲಿ ಕಲ್ಲು ಮಿತಿಮೀರಿ ಬೆಳೆದರೆ ಶಸ್ತ್ರಚಿಕಿತ್ಸೆ ಕೂಡ ಮಾಡಬೇಕಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ನಂತರವೂ ಮತ್ತೆ ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಇರುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು. ಈ ಮನೆಮದ್ದಿನಿಂದ 10 ದಿನಗಳ ಒಳಗೆ  ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ.


ಒಂದು ಪಾತ್ರೆಯಲ್ಲಿ 600ml ನೀರನ್ನು ಹಾಕಿ ಕುದಿಯಲು ಒಲೆ ಮೇಲೆ ಇಡಿ. ಆಮೇಲೆ ಅದಕ್ಕೆ 4 ಚಮಚ ಸಕ್ಕರೆ, 4 ಚಮಚ ನಿಂಬೆರಸ, 1 ಚಮಚ ಅರಶಿನ ಪುಡಿ ಹಾಗು 10ಗ್ರಾಂ ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಕುದಿಸಿ. ಅದು 600ml ನಿಂದ 300 ml ಬರುವ ತನಕ ಕುದಿಸಬೇಕು. ನಂತರ ಅದನ್ನು ತಣ್ಣಗಾಗಿಸಿ ಒಂದು ಬಾಟಲಿನಲ್ಲಿ ತುಂಬಿಸಿಡಿ. ದಿನಕ್ಕೆ 50ಗ್ರಾಂ ನಂತೆ ಮೂರು ಬಾರಿ ಸೇವಿಸಬೇಕು. ಇದನ್ನು ಸತತವಾಗಿ 8-10 ದಿನ ಸೇವಿಸಿದರೆ ಕಿಡ್ನಿ ಕಲ್ಲು ಕರಗುತ್ತದೆ. ಆದರೆ ಆ ಸಮಯದಲ್ಲಿ ಮಾಂಸ, ಬದನೆಕಾಯಿ, ಪೇರಳೆ ಹಣ್ಣನ್ನು ತಿನ್ನಬಾರದು.ಹಾಗೇ ತುಂಬಾ ನೀರು ಕುಡಿಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂತಹ ವ್ಯಕ್ತಿಗಳ ಜೊತೆ ಸೆಕ್ಸ್ ಮಾಡಲೇಬೇಡಿ