ಬೆಂಗಳೂರು: ಪ್ರತಿಯೊಬ್ಬರ ಅಭಿರುಚಿಗಳು ಭಿನ್ನವಾಗಿರುತ್ತದೆ. ಈ ವಿಧವಾಗಿ ಅವರಿಗಿಷ್ಟವಾದ ಬಣ್ಣವನ್ನು ಆಯ್ಕೆಮಾಡುತ್ತಾರೆ. ಹಾಗೆ ಬಣ್ಣಕ್ಕನುಗುಣವಾಗಿ ವಸ್ತುಗಳನ್ನು, ವಾಹನಗಳನ್ನು ಉಪಯೋಗಿಸುತ್ತಾರೆ.
ವಾರದಲ್ಲಿ ಏಳು ದಿನಗಳಲ್ಲಿ ಏಳು ವಿವಿಧ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಭಾನುವಾರ ಕ್ಕೆ ಸೂರ್ಯ ಅಧಿಪತಿಯಾಗಿರುವುದರಿಂದ ಅಂದು ಕೆಂಪು, ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು. ಸೋಮವಾರಕ್ಕೆ ಚಂದ್ರ ಹಾಗೂ ಮಹಾಶಿವ ಅಧಿಪತಿಯಾಗಿರುವುದರಿಂದ ಅಂದು ನೀಲಿ, ಸಿಲ್ವರ್,ಹಾಗು ಲೈಟ್ ಗ್ರೇ ಬಣ್ಣದ ಬಟ್ಟೆಯನ್ನು ಧರಿಸಿ. ಮಂಗಳವಾರಕ್ಕೆ ಅಂಗರಕ, ಆಂಜನೇಯ ಸ್ವಾಮಿ ಅಧಿಪತಿಯಾಗಿರುವುದರಿಂದ ಅಂದು ಕೂಡ ಕೆಂಪು, ಕೇಸರಿ ಬಟ್ಟೆ ಧರಿಸುವುದರಿಂದ ಕಷ್ಟಗಳು ದೂರವಾಗುತ್ತದೆ.
ಬುಧವಾರಕ್ಕೆ ಬುಧಗ್ರಹ ಹಾಗೂ ಶ್ರೀಕೃಷ್ಣ ಅಧಿಪತಿಯಾಗಿರುವುದರಿಂದ ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು. ಗುರುವಾರಕ್ಕೆ ಬೃಹಸ್ಪತಿ ಅಧಿಪತಿಯಾಗಿರುವುದರಿಂದ ಹಳದಿ ಬಣ್ಣದ ಬಟ್ಟೆಯನ್ನುಧರಿಸಿದರೆ ಆ ದಿನವೆಲ್ಲಾ ಒಳ್ಳೆಯದಾಗಿರುತ್ತದೆ. ಶುಕ್ರವಾರಕ್ಕೆ ಶುಕ್ರಗ್ರಹ ಅಧಿಪತಿಯಾಗಿರುವುದರಿಂದ ಹಸಿರು, ನೀಲಿ, ಬಿಳಿ ಬಣ್ಣದ ಬಟ್ಟೆ ತೊಟ್ಟರೆ ಒಳ್ಳೆಯದು. ಶನಿವಾರ ಶನಿ ಮಹತ್ಮರು ಅಧಿಪತಿಯಾಗಿರುವುದರಿಂದ ನೀಲಿ ಹಾಗು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.