ಬೆಂಗಳೂರು: ಹೆಚ್ಚಿನವರಿಗೆ ಮೊಣ ಕೈ ಹಾಗು ಕಾಲು ತುಂಬಾ ಕಪ್ಪಾಗಿರುತ್ತದೆ. ಇದರಿಂದ ಅವರಿಗೆ ಫ್ಯಾಶನ್ ಉಡುಪುಗಳನ್ನು ಧರಿಸಲು ಆಗುವುದಿಲ್ಲ. ಇದನ್ನು ಮನೆಮದ್ದು ಉಪಯೋಗಿಸಿ ಕಡಿಮೆಮಾಡಬಹುದು.
ನಿಂಬೆ ಹಣ್ಣು ½ ತೆಗೆದುಕೊಂಡು ಅದರ ಮೇಲೆ ½ ಚಮಚ ಸಕ್ಕರೆಯನ್ನು ಹಾಕಿ ಆ ನಿಂಬೆ ಹಣ್ಣಿನಿಂದ ಮೊಣ ಕೈ ಕಾಲುಗಳ ಮೇಲೆ ಚೆನ್ನಾಗಿ ಉಜ್ಜಬೇಕು. ನಂತರ 10-15 ನಿಮಿಷ ಒಣಗಲು ಬಿಟ್ಟು ಆಮೇಲೆ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
½ ಚಮಚ ಅಡುಗೆ ಸೋಡಾಕ್ಕೆ 1 ಚಮಚ ಹಾಲು ಹಾಕಿ ಮಿಕ್ಸ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಮೊಣ ಕೈ ಕಾಲುಗಳಲ್ಲಿ ಕಪ್ಪಾಗಿರುವ ಜಾಗದ ಮೇಲೆ ಹಚ್ಚಿ. ಒಣಗಿದ ಮೇಲೆ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮೂರ್ನಾಲ್ಕು ದಿನ ಹೀಗೆ ಮಾಡಿದರೆ ಕಪ್ಪು ಕಲೆ ಹೋಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ