Publish Date: Thu, 19 Mar 2020 (15:11 IST)
Updated Date: Thu, 19 Mar 2020 (15:13 IST)
ಪ್ರಶ್ನೆ: ಸರ್, ನನಗೆ 33 ವರ್ಷಗಳು. ಕಚೇರಿಯಲ್ಲಿ ಜೊತೆಯಾಗಿ ಕೆಲಸ ಮಾಡುವ ಗೆಳೆಯನನ್ನು ಪ್ರೀತಿ ಮಾಡುತ್ತಿರುವೆ. ಅವನಿಗೆ ಬೇರೆ ಹುಡುಗಿ ಜೊತೆ ಅಫೇರ್ ಇತ್ತು. ಇದೀಗ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ. ಹೀಗಾಗಿ ನನ್ನ ಜೊತೆಗೆ ಅವನು ಲವ್ ಮಾಡ್ತಿದ್ದಾನೆ.
ಯಾವಾಗ ನಾವಿಬ್ಬರೂ ಲವ್ ಮಾಡ್ತಿದ್ದೀವಿ ಅನ್ನೋ ವಿಷಯ ಆತನ ಹಳೇ ಲವರ್ ಗೆ ಗೊತ್ತಾಯಿತೋ ಆಕೆ ಮತ್ತೆ ಈಗ ನನ್ ಪ್ರಿಯಕರನ ಬೆನ್ನು ಬಿದ್ದಿದ್ದಾಳೆ. ಹೀಗಾಗಿ ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ.
ಸಲಹೆ: ನಿಮ್ಮ ಪರಿಸ್ಥಿತಿ ಬಗ್ಗೆ ಅರ್ಥವಾಗುತ್ತದೆ. ಈ ಕುರಿತು ನೀವು ಅವಳೊಂದಿಗೆ ಹಾಗೂ ನಿಮ್ಮ ಪ್ರಿಯಕರನೊಂದಿಗೆ ನೇರವಾಗಿ ಚರ್ಚೆ ಮಾಡಿ. ನಿಮ್ಮ ಸಂಬಂಧದ ಬಗ್ಗೆ ಒಂದು ಸರಿಯಾದ ನಿರ್ಧಾರದ ಬಗ್ಗೆ ಕೇಳಿ. ಅವಳು ನಿಮಗಿಂತ ಜಾಸ್ತಿ ಮೊದಲಿನ ಹುಡುಗಿ ಜತೆ ಮಾತನಾಡುತ್ತಿದ್ದರೆ ಅವಳಿಗೆ ಅವನ ಮೇಲೆಯೇ ಜಾಸ್ತಿ ಪ್ರೀತಿ ಇದ್ದ ಹಾಗೇ ಇದೆ ಎಂದು ತಿಳಿದುಕೊಳ್ಳಿ. ಸರಿಯಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ.