Publish Date: Thu, 19 Mar 2020 (14:58 IST)
Updated Date: Thu, 19 Mar 2020 (15:06 IST)
ಪ್ರಶ್ನೆ: ಸರ್, ನಾನು ಒಬ್ಬಳು ಕಾಲೇಜ್ ಕಲಿಯುತ್ತಿರುವ ಯುವತಿಯನ್ನು ಪ್ರೀತಿಸುತ್ತಿರುವೆ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ.
ನನ್ನ ಸಮಸ್ಯೆ ಏನೆಂದರೆ ನಾನು ಈ ಹಿಂದೆ ನಮ್ಮ ಸಂಬಂಧಿಕರಲ್ಲಿ ಹುಡುಗಿಯೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿರುವೆ. ಕಾರಣಾಂತರದಿಂದ ನಮ್ಮ ಮದುವೆ ಆಗಲಿಲ್ಲ. ಈಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾಗುತ್ತಿರುವೆ. ಇವಳೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದೇನೆ. ಅಸುರಕ್ಷಿತ ವಿಧಾನದ ಮಿಲನದಿಂದ ತೊಂದರೆ ಜಾಸ್ತಿನಾ? ತಿಳಿಸಿ.
ಉತ್ತರ: ಮದುವೆಗೂ ಮೊದಲೇ ನೀವು ಅಸುರಕ್ಷಿತ ಲೈಂಗಿಕತೆಯಲ್ಲಿ ತೊಡಗಿರುವುದು ಒಳ್ಳೆಯದಲ್ಲ. ನಿಮ್ಮಿಂದಾಗಿ ನಿಮ್ಮ ಸಂಬಂಧಿ ಹಾಗೂ ಈಗ ನೀವು ಮದುವೆಯಾಗುತ್ತಿರುವ ಯುವತಿ ಗರ್ಭ ಧರಿಸಿದ್ದರೆ ಅದರಿಂದ ಸಮಸ್ಯೆಗಳೇ ಜಾಸ್ತಿ. ಮದುವೆಗೂ ಮೊದಲೇ ದೈಹಿಕ ಸುಖ ಪಡೆಯೋದು ಒಳ್ಳೆಯದಲ್ಲ. ಕೂಡಲೇ ಮದುವೆಯಾಗಿ ಯುವತಿಗೆ ಬಾಳು ನೀಡಿ.