Publish Date: Tue, 17 Mar 2020 (15:11 IST)
Updated Date: Tue, 17 Mar 2020 (15:13 IST)
ಸಮಸ್ಯೆ: ಸರ್ ಮದುವೆ ಆಗಿ 2 ವರ್ಷ ಆಗಿದೆ. ನನ್ನ ಪತ್ನಿ ಈಗ ಗರ್ಭವತಿಯಾಗಿದ್ದು ಇದೀಗ ನಾಲ್ಕು ತಿಂಗಳು ತುಂಬುತ್ತಿದೆ. ನನ್ನ ಮಡದಿ ಗರ್ಭವತಿಯಾದಂದಿನಿಂದ ನನ್ನ ಪತ್ನಿ ಜೊತೆ ಸಂಭೋಗ ನಡೆಸಿಲ್ಲ. ನಾನು ಹಾಗೂ ಪತ್ನಿ ಬೇರೆ ಬೇರೆ ಮಲಗಬೇಕೆಂದು ಕೆಲವರು ಹೇಳುತ್ತಿದ್ದಾರೆ.
ಆದರೂ ನನ್ನ ಪತ್ನಿಗೆ ಕೂಡಿ ಮಲಗೋದ್ರಲ್ಲಿ ಆಸಕ್ತಿಯಿದೆ. ಆದರೆ ನನ್ನಾಕೆಗೆ ಏನಾದರೂ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಆಕೆಯ ಜೊತೆ ಅದನ್ನ ನಡೆಸುತ್ತಿಲ್ಲ. ಆಕೆ ನನ್ನ ಬಳಿ ಅದಕ್ಕೆ ಅಪೇಕ್ಷಿಸುತ್ತಾಳೆ. ಗರ್ಭಿಣಿ ಹೆಂಡತಿ ಜೊತೆಗೆ ಸರಸ ಎಷ್ಟು ಸೂಕ್ತ?
ಸಲಹೆ: ಹೆಣ್ಣು ಗರ್ಭವತಿ ಆಗಿದ್ದರೂ ಕೂಡಾ ಲೈಂಗಿಕ ಸಂತೋಷವನ್ನು ಗಳಿಸುತ್ತಿರುತ್ತಾಳೆ ಮತ್ತು ಲೈಂಗಿಕ ಸಂತೋಷವನ್ನು ಗಂಡನಿಗೂ ನೀಡುತ್ತಿರುತ್ತಾಳೆ. ಮಡದಿ ಗರ್ಭಿಣಿಯಾದ ಒಂದರಿಂದ ಮೂರು ತಿಂಗಳ ತನಕ ಅದನ್ನ ನಡೆಸಬಾರದು. ಹಾಗೂ ಗರ್ಭಿಣಿಗೆ ಏಳು ತಿಂಗಳ ನಂತರ ಸಂಭೋಗ ನಡೆಸಬಾರದು.
ಇದರಿಂದ ಪಿಂಡಗೂಸಿಗೆ ತೊಂದರೆ ಅಥವಾ ಆಕೆಗೆ ಗರ್ಭಪಾತವಾಗುವ ಸಂಭವವಿದೆ. ನಾಲ್ಕರಿಂದ ಏಳು ತಿಂಗಳ ಒಳಗೆ ಮಡದಿಯ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ರತಿಸುಖ ನಡೆಸಬಹುದು. ಆದರೆ ಎಚ್ಚರ ತುಂಬಾ ಮುಖ್ಯ. ಉದಾಹರಣೆಗೆ ನಿಂತ ಭಂಗಿಯಲ್ಲಿ ಆಕೆ ಹೊಟ್ಟೆಗೆ ಭಾರವಾಗದ ರೀತಿಯಲ್ಲಿ ಅದನ್ನ ನಡೆಸಬಹುದು. ಆಕೆಯ ಹೊಟ್ಟೆಯ ಮೇಲೆ ಭಾರ ಹಾಕಿದರೆ ಅಪಾಯ ಅನ್ನೋದನ್ನು ನೆನಪಿಡಿ.