Publish Date: Mon, 30 Dec 2019 (13:54 IST)
Updated Date: Mon, 30 Dec 2019 (13:56 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ಮಗು ಆಗಿಲ್ಲ. ಗಂಡನಿಂದ ನನಗೆ ಸರಿಯಾಗಿ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೆವು.
ಆ ಬಳಿಕ ಗಂಡ ನನ್ನ ಜೊತೆ ಮಲಗೋಕೆ ಬರುತ್ತಿಲ್ಲ. ಆಫೀಸ್ ನಲ್ಲಿನ ಹುಡುಗಿಯರ ಜೊತೆಗೆ ಚಾಟ್, ಹರಟೆ, ಟೂರ್ ಹೋಗುತ್ತಿದ್ದಾರೆ. ನನಗೆ ಜಿಗುಪ್ಸೆಯಾಗುತ್ತಿದೆ. ನಾನೂ ಬೇರೆಯವರನ್ನು ಲವ್ ಮಾಡಲಾ?
ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ. ಮದುವೆಯಾದ ಮೇಲೆ ಗಂಡನಿಗೆ ಸರ್ವಸ್ವ ಅರ್ಪಿಸಬೇಕು ಎಂಬುದನ್ನ ಮರೆತಿರುವ ನೀವು, ನಿಮಗರಿವಿಲ್ಲದಂತೆ ನಿಮ್ಮ ಕಾಲ ಮೇಲೆ ಕಲ್ಲು ಎಳೆದುಕೊಂಡಿದ್ದೀರಿ.
ಗಂಡ ಬೇಕೋ ಅಥವಾ ಇನಿಯ ಬೇಕು ಎಂಬುದನ್ನು ನೀವೇ ನಿರ್ಧರಿಸಿ. ಗಂಡನ ವರ್ತನೆ ಬಗ್ಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.