Publish Date: Sun, 22 Dec 2019 (15:44 IST)
Updated Date: Sun, 22 Dec 2019 (15:45 IST)
ಪ್ರಶ್ನೆ : ಸರ್, ನನ್ನ ಮದುವೆಯಾಗಿ ಮೂರು ತಿಂಗಳಾಗಿವೆ. ಮಗು ಸಧ್ಯಕ್ಕೆ ಬೇಡ ಅಂತ ನಾನು – ನನ್ನ ಪತ್ನಿ ತೀರ್ಮಾನ ಮಾಡಿದ್ದೇವೆ. ಆದರೆ ಕಾಂಡೋಮ್ ಬಳಸಿ ಸಂಭೋಗ ನಡೆಸಿದರೆ ಪತ್ನಿಗೆ ಹೆಚ್ಚು ಸುಖ ಸಿಗುತ್ತಿಲ್ಲ. ಹೀಗಾಗಿ ಬೇರೆ ದಾರಿ ಅಥವಾ ಆಯ್ಕೆ ಇದೆಯಾ?
ಸಲಹೆ: ತಜ್ಞ ವೈದ್ಯರಿಂದ ನಿಮ್ಮ ಪತ್ನಿಗೆ ಕಾಪರ್ ಟಿ ಹಾಕಿಸಬಹುದು. ಇಲ್ಲವೇ ಮನೆಯಲ್ಲಿಯೇ ಅಂದರೆ ಮನೆಮದ್ದನ್ನು ವೈದ್ಯರ ಸಲಹೆ ಪಡೆದು ಬಳಸಬೇಕು.
ಬೇವಿನ ಎಣ್ಣೆಯೊಂದಿಗೆ ಸ್ಪರ್ಮ್ ಸೇರಿದಾಗ ಅದು ತನ್ನ ಬಲವಾದ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಬೇವಿನ ಎಲೆಗಳನ್ನು ಮಾತ್ರೆ ರೂಪದಲ್ಲಿ ಸೇವನೆ ಮಾಡಬಹುದು ಅಥವಾ ಅದರ ಎಲೆಗಳನ್ನು ಹಾಕಿ ಟೀ ಮಾಡಿ ಕುಡಿಯಬಹುದಾಗಿದೆ.
ಇದರಿಂದ ಗರ್ಭ ತಡೆ ಸಾಧ್ಯವಾಗಬಹುದಾದರೂ ವೈದ್ಯರನ್ನ ಭೇಟಿ ಮಾಡಿಯೇ ಈ ಚಿಕಿತ್ಸೆ ಮುಂದುವರಿಸಿರಿ.