Publish Date: Fri, 24 Apr 2020 (09:24 IST)
Updated Date: Fri, 24 Apr 2020 (09:25 IST)
ಬೆಂಗಳೂರು: ನನಗೆ ಈಗ 41 ವರ್ಷ. ಈಗಾಗಲೇ ಒಂದು ಮಗುವಿದೆ. ಇನ್ನೊಂದು ಮಗು ಪಡೆಯಬೇಕೆಂಬ ಆಸೆಯಿದೆ. ಈ ವಯಸ್ಸಿನಲ್ಲಿ ಗರ್ಭಿಣಿಯಾಗಬಹುದೇ?
ಆರೋಗ್ಯವಂತ ಮಗು ಬೇಕೆಂದರೆ 35 ರೊಳಗೇ ಮಗು ಪಡೆಯಬೇಕು ಎಂದು ಹೆಚ್ಚಿನ ತಜ್ಞರೂ ಸಲಹೆ ಕೊಡುತ್ತಾರೆ. ಆದರೆ 41 ವರ್ಷ ವಯಸ್ಸಿನಲ್ಲೂ ನೀವು ಆರೋಗ್ಯವಂತರಾಗಿದ್ದರೆ, ಋತುಚಕ್ರ ಸರಿಯಾಗಿ ಆಗುತ್ತಿದ್ದರೆ ಮಗು ಪಡೆಯುವುದರಲ್ಲಿ ತಪ್ಪಿಲ್ಲ. ಆದರೆ ಇದಕ್ಕೆ ಮೊದಲು ನಿಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ತಜ್ಞ ವೈದ್ಯರಿಂದ ಪರೀಕ್ಷೆ ನಡೆಸುವುದು ಉತ್ತಮ.