Publish Date: Wed, 19 Feb 2020 (08:51 IST)
Updated Date: Wed, 19 Feb 2020 (08:53 IST)
ಬೆಂಗಳೂರು: ನಾನು 19 ವರ್ಷದ ತರುಣ. ಲೈಂಗಿಕ ತೃಪ್ತಿಗಾಗಿ ಆತ್ಮರತಿ ಮಾಡುವುದರ ಬಗ್ಗೆ ಓದಿದ್ದೇನೆ. ಆತ್ಮರತಿ ಮಾಡಿದರೆ ಖುಷಿಯಾಗುತ್ತದೆ ನಿಜ. ಆದರೆ ಇದರಿಂದ ಸುಮ್ಮನೇ ವೀರ್ಯಾಣು ಹೊರ ಚೆಲ್ಲಿ ನಷ್ಟವಾಗುತ್ತದಲ್ಲಾ?
ನಿಮ್ಮ ಕಲ್ಪನೆ ಖಂಡಿತಾ ತಪ್ಪು. ವೀರ್ಯಾಣು ಹೊರಚೆಲ್ಲುವುದರಿಂದ ಅದು ನಷ್ಟವಾಗುವುದಿಲ್ಲ. ಪ್ರತಿನಿತ್ಯವೂ ಆರೋಗ್ಯವಂತ ಪುರುಷರಲ್ಲಿ ಹೊಸ ವೀರ್ಯಾಣು ಉತ್ಪತ್ತಿಯಾಗುತ್ತಲೇ ಇರುತ್ತವೆ. ಹೀಗಾಗಿ ಆತ್ಮರತಿ ಮಾಡಿದಾಗ ಹಳೇ ವೀರ್ಯಾಣುಗಳು ಹೊರ ಚೆಲ್ಲಿ ಹೊಸದಾಗಿ ಉತ್ಪತ್ತಿಯಾಗುತ್ತಲೇ ಇರುತ್ತವೆ. ಇದರಿಂದ ನಿಮ್ಮ ಪುರುಷತ್ವಕ್ಕೆ ಯಾವುದೇ ಧಕ್ಕೆಯಾಗದು.