Publish Date: Wed, 18 Dec 2019 (08:56 IST)
Updated Date: Wed, 18 Dec 2019 (08:57 IST)
ಬೆಂಗಳೂರು: ನಾನು ಮದುವೆಯಾಗಿ ಒಂದು ತಿಂಗಳು ಕಳೆದಿದೆಯಷ್ಟೇ. ಇದುವರೆಗೆ ನನ್ನ ಪತ್ನಿ ಜತೆ ದೈಹಿಕವಾಗಿ ಸೇರಲು ಸಾಧ‍್ಯವಾಗಿಲ್ಲ. ಕಾರಣ ಅವಳಿಗೆ ವಿಪರೀತ ನಾಚಿಕೆ ಸ್ವಭಾವ. ನನ್ನ ಎದುರು ತೆರೆದುಕೊಳ್ಳಲು ಭಯಪಡುತ್ತಾಳೆ. ಕೇಳಿದರೆ ಸಮಯ ಬೇಕೆನ್ನುತ್ತಾಳೆ. ನಮ್ಮ ಸಮಸ್ಯೆ ಬಗೆಹರಿಯಬಹುದೇ?
ಹೊಸದಾಗಿ ಮದುವೆಯಾದ ಯುವತಿಯರಲ್ಲಿ ಲೈಂಗಿಕತೆ ಬಗ್ಗೆ ಹೆಚ್ಚಿನ ಅರಿವು ಇರದೇ ಇದ್ದಾಗ ಇಂತಹ ಸಮಸ್ಯೆಗಳು ಸಹಜ. ಇದನ್ನು ಸರಿಪಡಿಸಲು ಮೊದಲು ಆಕೆಗೆ ನೀವು ಮಾನಸಿಕವಾಗಿ ಹತ್ತಿರವಾಗಬೇಕು. ಮೊದಲು ಆಕೆ ಬಯಸಿದ ಗೆಳೆಯನಾಗಿ. ನಂತರ ನಿಧಾನವಾಗಿ ಪರಸ್ಪರ ಸ್ಪರ್ಶಿಸುವುದು, ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವುದು ಮಾಡುತ್ತಾ ಹಂತ ಹಂತವಾಗಿ ದೈಹಿಕ ಸಂಪರ್ಕಕ್ಕೆ ಅಣಿಯಾಗಿ. ಇದರಿಂದ ಆಕೆಗೂ ನಿಮ್ಮೊಂದು ಹೊಂದಿಕೊಳ್ಳಲು ಸಮಯ ನೀಡಿದಂತಾಗುತ್ತದೆ. ಸಮಸ್ಯೆ ಸರಿ ಹೋಗದೇ ಇದ್ದರೆ ಲೈಂಗಿಕ ತಜ್ಞರನ್ನು ಸಂಪರ್ಕಿಸಬಹುದು.