Publish Date: Wed, 18 Dec 2019 (08:50 IST)
Updated Date: Wed, 18 Dec 2019 (08:52 IST)
ಬೆಂಗಳೂರು: ನಾನು ಮದುವೆಯಾಗಬೇಕಿರುವ ಹುಡುಗಿಯ ಕನ್ಯತ್ವ ಪರೀಕ್ಷಿಸುವುದು ಹೇಗೆ? ಆಕೆ ಪರಿಶುದ್ಧಳಾಗಿದ್ದಾಳೆಯೇ ಎಂದು ತಿಳಿಯಲು ಯಾವುದಾದರೂ ದಾರಿ ಇದೆಯೇ?
ಮದುವೆಯಾಗಬೇಕಿರುವ ನಿಮಗೆ ನಿಮ್ಮ ಹುಡುಗಿಯ ಮೇಲೆ ಮೊದಲನೆಯದಾಗಿ ಬೇಕಾಗಿರುವುದು ನಂಬಿಕೆ. ಆಕೆ ಹಿಂದೆ ಹೇಗಿದ್ದಳು ಎನ್ನುವುದಕ್ಕಿಂತ ಈಗ ನಿಮ್ಮನ್ನು ಎಷ್ಟು ಪ್ರೀತಿಸುತ್ತಾಳೆ, ನಿಮ್ಮ ನಡುವೆ ಎಷ್ಟು ವಿಶ್ವಾಸವಿದೆ ಎನ್ನುವುದು ಮುಖ್ಯ. ಕನ್ಯತ್ವ ಪರೀಕ್ಷಿಸಲು ನಿರ್ದಿಷ್ಟವಾದ ಯಾವುದೇ ಪರೀಕ್ಷೆಯೂ ಇಲ್ಲ. ಒಬ್ಬ ಹುಡುಗಿಯನ್ನು ನೋಡಿ ಆಕೆ ನಿಮಗೆ ಸರಿಯಾದ ಜೋಡಿಯೋ, ನಿಮಗೆ ಸಮಾನವಾದ ಅಭಿರುಚಿ ಇದೆಯೋ ಎಂದು ನೋಡಿ ಮದುವೆಯಾಗಿ. ಬೇರೆ ಚಿಂತೆ ಮಾಡಬೇಕಿಲ್ಲ.