Publish Date: Thu, 28 Nov 2019 (08:56 IST)
Updated Date: Thu, 28 Nov 2019 (08:59 IST)
ಬೆಂಗಳೂರು: ಗುಪ್ತಾಂಗದ ಭಾಗ ಕಪ್ಪಾಗಿದೆ ಎಂದು ಚಿಂತೆ ಮಾಡುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ಕೆಲವು ಮನೆ ಮದ್ದುಗಳಿವೆ. ಅದು ಯಾವುದು ನೋಡೋಣ.
ಗುಪ್ತಾಂಗ ಕಪ್ಪಾಗಿರುವುದರ ಬಗ್ಗೆ ಕೆಲವರಿಗೆ ಕೀಳರಿಮೆಯಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಇದನ್ನು ಹೋಗಲಾಡಿಸುವುದು ಹೇಗೆ?
ಆದಷ್ಟು ಗುಪ್ತಾಂಗಗಳಿಗೆ ಸಡಿಲವಾದ ಬಟ್ಟೆ, ಕಾಟನ್ ಬಟ್ಟೆ ಧರಿಸಿ. ಹಾಗೆಯೇ ಶುಚಿತ್ವದ ಬಗ್ಗೆ ಗಮನಕೊಡಿ. ಇದನ್ನು ಹೋಗಲಾಡಿಸಲು ಮನೆಯಲ್ಲೇ ಬಳಸಬಹುದಾದ ಮದ್ದೆಂದರೆ ಅಲ್ಯುವೀರಾ ಜೆಲ್. ಮನೆಯಲ್ಲೇ ಅಲ್ಯುವೀರಾ ಬೆಳೆಯುತ್ತಿದ್ದರೆ ಅದರ ಜೆಲ್ ಬಳಸಿ ಗುಪ್ತಾಂಗಕ್ಕೆ ಮಸಾಜ್ ಮಾಡಿ. ಸುಮಾರು ಅರ್ಧಗಂಟೆಗಳ ಕಾಲ ಬಿಟ್ಟು ಬಳಿಕ ಶುಚಿಯಾದ ನೀರಿನಿಂದ ತೊಳೆದುಕೊಳ್ಳಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಫಲ ಕಾಣಬಹುದು.