Publish Date: Tue, 26 Nov 2019 (09:05 IST)
Updated Date: Tue, 26 Nov 2019 (09:07 IST)
ಬೆಂಗಳೂರು: ನನಗೆ ಮದುವೆಗೆ ಮೊದಲು ಗರ್ಲ್ ಫ್ರೆಂಡ್ ಒಬ್ಬಳಿದ್ದಳು. ಅವಳಿಂದ ಅದ್ಭುತ ಸುಖ ಪಡೆಯುತ್ತಿದ್ದೆ. ಆದರೆ ಈಗ ಬೇರೆ ಹುಡುಗಿ ಜತೆ ಮದುವೆಯಾಗಿದ್ದೇನೆ. ನನ್ನ ಪತ್ನಿಯಿಂದ ಹಳೆಯ ಗರ್ಲ್ ಫ್ರೆಂಡ್ ನಿಂದ ಸಿಗುತ್ತಿದ್ದ ಸುಖ ಸಿಗುತ್ತಿಲ್ಲ. ಹಾಗಾಗಿ ಮತ್ತೆ ಹಳೆಯ ಗರ್ಲ್ ಫ್ರೆಂಡ್ ಬಳಿ ಹೋಗಲೇ?
ವೈವಾಹಿಕ ಜೀವನದಲ್ಲಿ ಲೈಂಗಿಕ ಕ್ರಿಯೆಯೊಂದೇ ಎಲ್ಲವೂ ಅಲ್ಲ. ಪರಸ್ಪರ ಪ್ರೀತಿ, ನಂಬಿಕೆ ಇದ್ದರೆ ಮಾತ್ರ ಅಂತಹ ಸಂಬಂಧ ಉಳಿಯಲು ಸಾಧ‍್ಯ. ಕೇವಲ ದೈಹಿಕ ಸುಖಕ್ಕೋಸ್ಕರ ಬೇರೆ ಯುವತಿಯ ಸಹವಾಸ ಮಾಡಿದರೆ ಅದು ಪತ್ನಿಗೆ ಮಾಡಿದ ದ್ರೋಹವಾಗುತ್ತದೆ.
ಒಂದು ವೇಳೆ ನಿಮಗೆ ಪತ್ನಿಯಿಂದ ತೃಪ್ತಿ ಸಿಗುತ್ತಿಲ್ಲವೆಂದಾದರೆ, ನಿಮ್ಮ ನಿರೀಕ್ಷೆಯೇನು ಎಂಬುದನ್ನು ಆಕೆ ಬಳಿ ಹೇಳಬಹುದಲ್ಲವೇ? ಅದು ಬಿಟ್ಟು ಬೇರೆ ಹುಡುಗಿಯ ಸಹವಾಸ ಮಾಡಿದರೆ ನಿಮ್ಮ ಸಾಂಸಾರಿಕ ಜೀವನವೇ ಹಾಳಾಗಬಹುದು.