Publish Date: Thu, 21 Nov 2019 (09:07 IST)
Updated Date: Thu, 21 Nov 2019 (09:08 IST)
ಬೆಂಗಳೂರು: ನಾನು 24 ರ ತರುಣ, ಅವಿವಾಹಿತ. ಆದರೆ ಲೈಂಗಿಕ ತೃಪ್ತಿಗಾಗಿ ನಿಯಮಿತವಾಗಿ ಆತ್ಮರತಿ ಮಾಡಿಕೊಳ್ಳುತ್ತಿದ್ದೆ. ಆದರೆ ಇಲ್ಲೇ ಆಗಿದ್ದು ಎಡವಟ್ಟು. ಆತ್ಮರತಿ ಮಾಡಿದ ಮೇಲೆ ನನ್ನ ಜನನಾಂಗ ದಪ್ಪಗಾಗಿ ಬಾತುಕೊಂಡಂತಿದೆ. ಇದನ್ನು ಸರಿಪಡಿಸುವುದು ಹೇಗೆ?
ಒಂದು ವೇಳೆ ನೀವು ಆತ್ಮರತಿ ಮಾಡುವಾಗ ಗಡುಸಾಗಿ ಮಾಡಿರುವುದರಿಂದ ನಿಮ್ಮ ಜನನಾಂಗ ಬಾತುಕೊಂಡಂತಾಗಿರಬಹುದು. ಅದಲ್ಲದೇ ಹೋದಲ್ಲಿ ನಿಮಗೆ ಗುಪ್ತಾಂಗದ ಸೋಂಕು ಉಂಟಾಗಿದಲ್ಲೂ ಈ ರೀತಿ ಆಗುವ ಸಾಧ್ಯತೆಯಿದೆ. ಹೀಗಾಗಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.