Publish Date: Thu, 21 Nov 2019 (09:05 IST)
Updated Date: Thu, 21 Nov 2019 (09:07 IST)
ಬೆಂಗಳೂರು: ನನ್ನ ಪತ್ನಿ ಬೇರೆ ಊರಿನಲ್ಲಿದ್ದುಕೊಂಡು ಉದ್ಯೋಗಕ್ಕೆ ಹೋಗುತ್ತಾಳೆ. ವರ್ಷಕ್ಕೊಮ್ಮೆ ಮಾತ್ರ ನಾವು ಭೇಟಿ ಮಾಡುತ್ತೇವೆ. ಆದರೆ ಈ ಸಂದರ್ಭದಲ್ಲಿ ಆಕೆಯ ಜತೆ ಲೈಂಗಿಕ ಕ್ರಿಯೆ ನಡೆಸಲು ಒಂದು ರೀತಿಯ ಭಯ ಕಾಡುತ್ತದೆ. ಆಕೆ ಅಕ್ರಮ ಸಂಬಂಧ ಹೊಂದಿ, ಎಚ್ ಐವಿ ಪೀಡಿತೆಯಾಗಿರಬಹುದೇ ಇತ್ಯಾದಿ. ಇದಕ್ಕೆ ಪರಿಹಾರವೇನು?
ಇಂತಹ ಮನಸ್ಥಿತಿಯ ಪತಿಯಂದಿರು ಮೊದಲು ಮಾನಸಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ. ತನ್ನ ಸಂಸಾರ ಸರಿದೂಗಿಸಲು ಬೇರೆ ಊರಿಗೆ ಹೋಗಿ ದುಡಿಯುವ ಹೆಂಡತಿ ಮೇಲೆ ಗೌರವವಿರಬೇಕು. ಆಕೆಯ ಮೇಲೆ ವಿನಾಕಾರಣ ಸಂಶಯ ಪ್ರವೃತ್ತಿ ಬೆಳೆಸಿಕೊಳ್ಳಬೇಡಿ. ಒಂದು ವೇಳೆ ನಿಮಗೆ ಅಂತಹ ಅನುಮಾನವಿದ್ದರೆ, ಆಕೆಯ ಜತೆ ಮಾತನಾಡಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಅದು ಬಿಟ್ಟು ಸಂಶಯದಿಂದ ಸಂಸಾರ ಹಾಳು ಮಾಡಿಕೊಳ್ಳಬೇಡಿ.