ಸಾಮಾನ್ಯವಾಗಿ ನಮ್ಮಲ್ಲಿ ಹಲವರಿಗೆ ಹಿತ್ತಲಗಿಡ ಮದ್ದಲ್ಲ ಎಂದೇ ಭಾವನೆ. ನಮ್ಮ ನಮ್ಮ ಮನೆಯಂಗಳದಲ್ಲಿ ಬೆಳೆಯುವ ಎಷ್ಟೋ ಗಿಡಗಳು ಮಾನವನ ಆರೋಗ್ಯಕ್ಕೆ ಬೇಕಾಗುವ ಔಷಧೀಯ ಗುಣಗಳನ್ನು ಹೊಂದಿರುತ್ತವೆ ಎಂಬ ವಿಷಯವನ್ನೇ ಮರೆತಿರುತ್ತೇವೆ. ಅಂತಹ ಗಿಡಗಳ ಸಾಲಿಗೆ 'ಮುಟ್ಟಿದರೆ ಮುನಿ' ಗಿಡವೂ ಕೂಡಾ ಸೇರಿಕೊಳ್ಳುತ್ತದೆ. ಹೆಸರೇ ಹೇಳುವಂತೆ ಈ ಗಿಡದ ಎಲೆಗಳು ಮುಟ್ಟಿದರೆ ಮುದುಡಿಕೊಳ್ಳುತ್ತವೆ. ಇಂಗ್ಲಿಷ್‌ನಲ್ಲಿ ಇದಕ್ಕೆ ಟಚ್ ಮಿ ನಾಟ್ ಎಂದೇ ಹೆಸರು.
ಈ ಗಿಡದ ಎಲೆಗಳು ಮುದುಡಿಕೊಳ್ಳುವುದು ಕೂಡಾ ಒಂದು ನೈಸರ್ಗಿಕ ಪ್ರಕ್ರಿಯೆ. ಈ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿರುತ್ತವೆ ಅಷ್ಟೇ ಅಲ್ಲದೇ ಹುಳಹುಪ್ಪಟೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಒಂದು ಬಗೆ ಅಷ್ಟೇ. ಸುಮಾರಾಗಿ ಹಳ್ಳಿಕಡೆಗಳಲ್ಲಿ ಹೇರಳವಾಗಿ ಕಂಡುಬರುವ ಈ ಗಿಡಕ್ಕೆ ರಕ್ತಬೀಜಾಸುರನ ಸಂತತಿ ಎಂದೂ ಕರೆಯುವುದುಂಟು. ಏಕೆಂದರೆ ಗಾಳಿಯಲ್ಲಿ ಇದರ ಬೀಜಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಾರಿದರೂ ಒಂದು ಸಾವಿರಕ್ಕೂ ಅಧಿಕವಾಗಿ ಗಿಡಗಳು ಬೆಳೆಯುತ್ತವೆ.
* ಬಾವುಗಳಾಗಿದ್ದರೆ ಮುಟ್ಟಿದರೆ ಮುನಿ ಗಿಡವನ್ನು ಅರೆದು ಅದನ್ನು ಬಾವಿರುವ ಜಾಗದಲ್ಲಿ ಕಾಟನ್ ಬಟ್ಟೆಯಿಂದ ಸುತ್ತಿ ಕಟ್ಟಿದರೆ ಬಾವು ಬಹು ಬೇಗನೆ ನಿವಾರಣೆಯಾಗುತ್ತದೆ.
* ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಕುಡಿಯುವುದರಿಂದ ಮಲಬದ್ದತೆಯು ಶಮನವಾಗುತ್ತದೆ.
* ಮುಟ್ಟಿದರೆ ಮುನಿ ಗಿಡವನ್ನು ಜಜ್ಜಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯ ಮಾಡಿ ಕುಡಿದರೆ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೇ ಮೂಲವ್ಯಾಧಿಯು ಗುಣಮುಖವಾಗುತ್ತದೆ.
* ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಯುವುದರಿಂದ ಮಂಡಿನೋವು, ಮಂಡಿಊತ, ಮೂತ್ರಪಿಂಡ ಹಾಗೂ ಲಿವರ್‌ನ ತೊಂದರೆಗೆ ಉತ್ತಮ ಔಷಧವಾಗಿದೆ.
* ಮಹಿಳೆಯರಲ್ಲಿ ಅಧಿಕವಾಗಿ ರಕ್ತಸ್ರಾವವಾಗುವ ಸಮಸ್ಯೆ ಇದ್ದರೆ ಮುಟ್ಟಿದರೆ ಮುನಿ ಗಿಡದ ಕಷಾಯ ಕುಡಿದರೆ ನಿಧಾನವಾಗಿ ಆ ರಕ್ತನಾಳಗಳು ಸಂಕುಚಿತಗೊಂಡು ಸಮಸ್ಯೆಯು ಪರಿಹಾರವಾಗುತ್ತದೆ.